ಸದ್ದಿಲ್ಲದೆ ಸಪ್ತಪದಿ ತುಳಿದ್ರಾ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ!?

collage (1)
Published on

ಬಾಲಿವುಡ್​ನಲ್ಲಿ ಕರೊನಾದಿಂದಾಗಿ ಸಾಕಷ್ಟು ಸೆಲೆಬ್ರಿಟಿಗಳ ಮದುವೆ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ಮದುವೆ ಸಹವಾಸವೇ ಸಾಕು, ಪರಿಸ್ಥಿತಿ ತಿಳಿಯಾದ ಮೇಲೆ ಮದುವೆಯಾದರಾಯಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಿರುವಾಗಲೇ ಬಹುಭಾಷಾ ನಟಿ ಊರ್ವಶಿ ರೌಟೇಲಾ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಅವರ ಆ ಅದ್ದೂರಿ ಮದುವೆಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಹೌದು, ಕನ್ನಡದಲ್ಲಿ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜತೆ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಊರ್ವಶಿ, ಅದಾದ ಬಳಿಕ ಹಲವು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡರು. ಇತ್ತೀಚಿನ ಕೆಲ ವರ್ಷಗಳಿಂದ ಬಾಲಿವುಡ್​ನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗಿರುವಾಗಲೇ ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ಕಿರುತೆರೆ ನಟ ಗೌತಮ್ ಗುಲಾಟಿ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದಾರೆ. ಆದರೆ, ಆ ಮದುವೆ ರಿಯಲ್ ಅಲ್ಲ. ಬದಲಿಗೆ ರೀಲ್​!

ಅಂದರೆ, ನಟ ಗೌತಮ್​ ಇತ್ತೀಚೆಗಷ್ಟೇ ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಊರ್ವಶಿ ಜತೆಗಿನ ಫೋಟೋ ಹಾಕಿಕೊಂಡು, ‘ಮದುವೆಯ ಶುಭಾಶಯಗಳೆಂದು ಹರಸುವುದಿಲ್ಲವೇ’ ಎಂದು ಕ್ಯಾಪ್ಷನ್​ ನೀಡಿದ್ದರು. ಈ ಫೋಟೋಗಳನ್ನು ನೋಡಿ ಊರ್ವಶಿ ಮದುವೆಯಾದ್ರಾ ಎಂದೇ ತಿಳಿದುಕೊಂಡಿದ್ದರು ಅಭಿಮಾನಿಗಳು. ಅದಾದ ಬಳಿಕ ಅದು ಸಿನಿಮಾವೊಂದರ ಸನ್ನಿವೇಶದ ಫೋಟೋ ಎಂಬುದು ಗೊತ್ತಾಗಿದೆ.

ಗೌತಮ್ ಗುಲಾಟಿ ಮತ್ತು ಊರ್ವಶಿ ‘ವರ್ಜಿನ್ ಭಾನುಪ್ರಿಯ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಜುಲೈ 16ರಂದು ಓಟಿಟಿ ವೇದಿಕೆಯಲ್ಲಿ ಬಿಡುಡಗೆಯಾಗಲಿದೆ. ಈ ಚಿತ್ರದ ಮದುವೆಯ ದೃಶ್ಯವನ್ನು ಗೌತಮ್​ ಪೋಸ್ಟ್ ಮಾಡಿ, ನೆಟ್ಟಿಗರಿಗೆ ಶಾಕ್​ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net