

ಹೈದರಾಬಾದ್: ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ನಿಗೂಢ ಪೋಸ್ಟ್ಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಸೃಷ್ಟಿಸಲು ಹೆಸರುವಾಸಿಯಾಗಿದ್ದಾರೆ. ಆದರೆ ಭಾನುವಾರ ಅವರು, ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ವಿರುದ್ಧ ಕಿಡಿಕಾರಿ ಸುದ್ದಿಯಾಗಿದ್ದಾರೆ. 'ತೆಲುಗು ನಟ ಮತ್ತು ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಯಿಂದ ರೌಟೇಲಾ ಕಿರುಕುಳ' ಅನುಭವಿಸುತ್ತಿದ್ದಾರೆ ಎಂಬ ಉಮೇರ್ ಹೇಳಿಕೆಗೆ ಊರ್ವಶಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಊರ್ವಶಿ, ಉಮಾರ್ ಸಂಧು ಮಾಡಿದ್ದ ಟ್ವಿಟ್ನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಉಮರ್ ಸಂಧು ಮಾಡಿದ್ದ ಟ್ವೀಟ್ನಲ್ಲಿ "ಅಖಿಲ್ ಅಕ್ಕಿನೇನಿ ಯುರೋಪ್ನಲ್ಲಿ ಏಜೆಂಟ್ ಚಿತ್ರದ ಐಟಂ ಸಾಂಗ್ ಶೂಟಿಂಗ್ನಲ್ಲಿ ಬಾಲಿವುಡ್ ನಟಿ ಉರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ. ರೌಟೇಲಾ ಪ್ರಕಾರ, ಅಖಿಲ್ ಅಕ್ಕಿನೇನಿ ತುಂಬಾ ಅಪಕ್ವವಾದ ನಟರಾಗಿದ್ದು ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ" ಎಂದಯ ಬರೆದುಕೊಂಡಿದ್ದರು. ಊರ್ವಶಿ ರೌಟೇಲಾ ಉಮೈರ್ ಸಂಧು ಹೇಳಿಕೆಯನ್ನು ನಿರಾಕರಿಸಿದ್ದು ಆತನ ಟ್ವಿಟ್ಅನ್ನು ಇನ್ಸ್ಟಾಗ್ರಾಮ್ನಲ್ಲಿ 'ಫೇಕ್' ಎಂದು ಕರೆದಿದ್ದಾರೆ.
ತನ್ನ ಮತ್ತು ತನ್ನ ಕುಟುಂಬವನ್ನು ಮುಜುಗರಕ್ಕೆ ಈಡು ಮಾಡಿದ್ದಕ್ಕಾಗಿ ಉಮೈರ್ ಸಂಧು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಊರ್ವಶಿ ಬರೆದಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ "ನನ್ನ ಕಾನೂನು ತಂಡ, ಉಮೈರ್ ಸಂಧುಗೆ ಲೀಗಲ್ ನೋಟಿಸ್ ನೀಡಿದೆ. ನಿಮ್ಮ ನಕಲಿ/ಹಾಸ್ಯಾಸ್ಪದ ಟ್ವಿಟ್ಗಳಿಗಾಗಿ ನಾನು ಅಸಮಾಧಾನಗೊಂಡಿದ್ದೇನೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ನೀವು ತುಂಬಾ ಅಪ್ರಬುದ್ಧ ರೀತಿಯ ಪತ್ರಕರ್ತರಾಗಿದ್ದು ನಾನು ಮತ್ತು ನನ್ನ ಕುಟುಂಬ ಇದರಿಂದಾಗಿ ಮುಜುಗರಕ್ಕೆ ಈಡಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)