93 ಲಕ್ಷ ರೂ. ಖರ್ಚು ಮಾಡಿ ಬರ್ತಡೇ ಸೆಲೆಬ್ರೆಟ್​ ಮಾಡಿಕೊಂಡ ಊರ್ವಶಿ ರೌಟೇಲಾ!

urvashi rautela
Published on

ಮುಂಬೈ: ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಸಿನಿಮಾ ವಿಚಾರವಾಗಿ ಸುದ್ದಿಯಾಗುವುದಕ್ಕಿಂತ ವೈಯಕ್ತಿಕ ವಿಚಾರವಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ. ಈ ನಟಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಸರಿಸುಮಾರು 93 ಲಕ್ಷ ರೂ. ಹಣವನ್ನು ಖರ್ಚುಮಾಡಿದ್ದಾರೆ ಎನ್ನಲಾಗುತ್ತಿದೆ.

ನಟಿ ಊರ್ವಶಿ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಊರ್ವಶಿಯ ಐಷಾರಾಮಿ ಹುಟ್ಟುಹಬ್ಬದಕ್ಕೆ ಬರೋಬ್ಬರಿ 93 ಲಕ್ಷ ರೂಪಾಯಿ ಅಷ್ಟು ಖರ್ಚು ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ತನ್ನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ಊರ್ವಶಿ 24-ಕ್ಯಾರೆಟ್ ಚಿನ್ನದ ಕಪ್‌ಕೇಕ್‌ಗಳ ಜೊತೆಗೆ 100 ವಜ್ರದ ರೋಸ್ ಮತ್ತು ಡೈಮಂಡ್ ಕೇಕ್‌ಗಳನ್ನು ಮಾಡಿಸಿದ್ದಳು.  ಹೀಲಿಯಂ ಬಲೂನ್‌ಗಳು, ಗುಲಾಬಿಗಳು ಮತ್ತು ಅದ್ದೂರಿ ಮೇಣದಬತ್ತಿಗಳಿಂದ ಅಲಂಕರಿಸಲಾಗಿತ್ತು. ರಾಯಲ್ ಬ್ಲೂ ಮಿನಿ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.

ಲಕ್ಷ ..ಲಕ್ಷ ಖರ್ಚು ಮಾಡಿ ಬರ್ತಡೇ ಆಚರಿಸಿರುವ ಊರ್ವಶಿ ಅವರ ಬರ್ತಡೇ ಆಚರಣೆಗೆ ಯಾರೆಲ್ಲಾ ಹಾಜರಾಗಿದ್ದರು ಎನ್ನುವ ಮಾಹಿತಿ ರಿವೀಲ್ ಮಾಡಿಲ್ಲ. ಕೇವಲ ತನ್ನ ಫೋಟೋಗಳನ್ನು ಮಾತ್ರ ಶೇರ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net