ದೇಹದಲ್ಲಿ ಯೂರಿಕ್​ ಆಮ್ಲ ಹೆಚ್ಚಾದ್ರೆ ಕಾಡಲಿದೆ ಅನೇಕ ಸಮಸ್ಯೆ: ಇಲ್ಲಿದೆ ನೋಡಿ ಪರಿಹಾರ…

Uric Acid
Published on

ನವದೆಹಲಿ: ದೇಹದಲ್ಲಿ ಯೂರಿಕ್​ ಆಮ್ಲ ಹೆಚ್ಚಾದಷ್ಟು ಅನೇಕ ಬಗೆಯ ರೋಗಗಳು ಬಾಧಿಸುತ್ತವೆ. ಅದರಲ್ಲೂ ಯೂರಿಕ್​ ಆಮ್ಲದಿಂದ ಸಂಧಿವಾತ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಶ್ವಾಸಕೋಶದಲ್ಲಿನ ಸಮಸ್ಯೆಯಿಂದಾಗಿ, ದೇಹದಲ್ಲಿ ಸಂಗ್ರಹವಾದ ಮೂತ್ರವನ್ನು ಫಿಲ್ಟರ್ ಮಾಡಲಾಗುವುದಿಲ್ಲ, ಇದು ಮೊಣಕಾಲುಗಳು ಮತ್ತು ಕೀಲುಗಳಲ್ಲಿ ಯೂರಿಕ್ ಆಮ್ಲಕ್ಕೆ ಕಾರಣವಾಗುತ್ತದೆ. ಇದರಿಂದ ಮಂಡಿನೋವಿನ ಸಮಸ್ಯೆಗಳ ಜೊತೆಗೆ ತೀವ್ರ ಕೀಲು ನೋವು ಬರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಸ್ಥೂಲಕಾಯ ನಿಯಂತ್ರಿಸಿ

ಸ್ಥೂಲಕಾಯವನ್ನೂ ನಿಯಂತ್ರಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ, ಯೂರಿಕ್​ ಆಮ್ಲ ಸಮಸ್ಯೆಗೆ ತೂಕ ಹೆಚ್ಚಳವೂ ಕಾರಣ ಎಂಬುದನ್ನು ಇತ್ತೀಚಿನ ಸಂಶೋಧನೆ ಒಂದು ತಿಳಿಸಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ದೇಹದ ತೂಕವನ್ನೂ ಸಹ ಕಡಿಮೆ ಮಾಡಿ ಎಂಬುದು ತಜ್ಞರ ಸಲಹೆಯಾಗಿದೆ.

ಪುದಿನ ಜ್ಯೂಸ್​ ಉತ್ತಮ

ಇನ್ನು ಸಂಧಿವಾತ ಸಮಸ್ಯೆಗೆ ಪುದಿನ ಜ್ಯೂಸ್​ ಒಂದು ಉತ್ತಮ ರಾಮಬಾಣ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ಪುದಿನ ಜ್ಯೂಸ್​ ಮಾಡುವುದು ಹೇಗೆ? ಹೇಗೆ ಸೇವಿಸಬೇಕು? ಎಂಬುದು ಮುಂದೆ ನೋಡೋಣ.

ಅಂದಹಾಗೆ ಪುದಿನದಲ್ಲಿ ಐರನ್​, ಪೊಟ್ಯಾಶಿಯಂ ಮತ್ತು ಮ್ಯಾಂಗನೀಸ್​ ಹೆಚ್ಚಿನ ಪ್ರಮಾಣದಲ್ಲಿ ಇವೆ. ಹೀಗಾಗಿ ಈ ಜ್ಯೂಸ್​ ಅನ್ನು ಪ್ರತಿದಿನ ಸೇವಿಸುವುದರಿಂದ ಸಂಧಿವಾತ ಸಮಸ್ಯೆಯಿಂದ ಪಾರಾಗಬಹುದು. ಅಲ್ಲದೆ, ಈ ಪುದಿನ ಜ್ಯೂಸ್ ಸ್ಥೂಲಕಾಯವನ್ನೂ​ ನಿಯಂತ್ರಿಸುತ್ತದೆ.

ಪುದಿನ ಜ್ಯೂಸ್​ ಮಾಡುವ ವಿಧಾನ

ಪುದಿನ ಜ್ಯೂಸ್​ ಮಾಡಲು ಮೊದಲು ಪುದಿನ ಎಲೆಗಳನ್ನು ಒಂದು ಬೌಲ್​ನಲ್ಲಿ ಬಿಡಿಸಿ ಇಟ್ಟುಕೊಳ್ಳಿ. ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಬಳಿಕ ಸ್ವಚ್ಛಗೊಳಿಸಿದ ಎಲೆಗಳನ್ನು ಮಿಕ್ಸಿಯಲ್ಲಿ ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ನಿಂಬೆ ರಸ, ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಮಿಕ್ಸ್​ ಮಾಡಿಕೊಳ್ಳಿ. ತಯಾರಾದ ಜ್ಯೂಸ್​ ಅನ್ನು ಲೋಟದಲ್ಲಿ ತೆಗೆದುಕೊಂಡು ಹತ್ತು ನಿಮಿಷ ಫ್ರಿಡ್ಜ್ ನಲ್ಲಿಟ್ಟು ಸೇವಿಸಿದರೆ, ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net