

ಹೈದರಾಬಾದ್: ಸ್ಟಾರ್ ನಟ- ನಟಿಯರಿಗೆ ಕಾರ್ ಮೇಲೆ ಕ್ರೇಜ್ ಹೆಚ್ಚಾಗಿರುತ್ತದೆ. ದುಬಾರಿ ಬೆಲೆ ಬಾಳುವ ಕಾರನ್ನು ಖರೀದಿ ಮಾಡುವುದು ಮಾತ್ರವಲ್ಲ, ವಿಶೇಷ ವಿನ್ಯಾಸ, ಕಲರ್ ಹಾಗೂ ನಂಬರ್ ಪ್ಲೇಟ್ನ್ನು ದುಬಾರಿಗೆ ಬೆಲೆಗೆ ಖರೀದಿಸುವ ಮೂಲಕವಾಗಿ ಸುದ್ದಿಯಲ್ಲಿರುತ್ತಾರೆ. ಟಾಲಿವುಡ್ ನಟ ನಾಗಾರ್ಜುನ ಅವರು ಇತ್ತೀಚೆಗೆ ಹೊಸ ಕಾರು ಖರೀದಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಹದಿನಾರನೇ ವಯಸ್ಸನ್ನು ಮೀರಿಯೂ ಫಿಟ್ ಆಗಿದ್ದಾರೆ ಮತ್ತು ಯುವ ನಾಯಕರಿಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ನಾಗಾರ್ಜುನ ಅವರ ಬಳಿ ಈಗಾಗಲೇ ಬೆಲೆ ಬಾಳುವ ಹವಾರು ಕಾರುಗಳಿವೆ. ಪ್ರಸ್ತುತ ಎಲೆಕ್ಟ್ರಿಕ್ ಕಾರುಗಳು ಚಾಲ್ತಿಯಲ್ಲಿವೆ. ಹೀಗಾಗಿ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.
ನಾಗಾರ್ಜುನ ಅವರು ಖರೀದಿಸಿದ ಕಾರು (Kia EV6) ಕಿಯಾ ಇವಿ6. ಅವರ ಮನೆಗೆ ಕಾರನ್ನು ವಿತರಿಸಲಾಯಿತು. ಕಾರಿನ ಬಣ್ಣ ಬಿಳಿ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಕಿಯಾ ವಿತರಕರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ನಾಗಾರ್ಜುನ ಹಾಗೂ ಪತ್ನಿ ಅಮಲಾ ಅವರನ್ನು ನೋಡಬಹುದಾಗಿದೆ.
ಕಾರಿನ ವಿಶೇಷತೆ: ಚಾಲಕನ ಆಸನವನ್ನು 10 ರೀತಿಯಲ್ಲಿ ಸರಿಹೊಂದಿಸಬಹುದು. ಇತರ ವೈಶಿಷ್ಟ್ಯಗಳೆಂದರೆ ಸ್ಮಾರ್ಟ್ ಕೀ, ವೈರ್ಲೆಸ್ ಚಾರ್ಜರ್, ಸ್ಟಾರ್ಟ್ ಮತ್ತು ಸ್ಟಾಪ್ ಬಟನ್, ಬ್ರೇಕಿಂಗ್ಗಾಗಿ ಪ್ಯಾಡಲ್ ಶಿಫ್ಟರ್. ಒಂದು ಬಾರಿ ಪುಲ್ ಚಾರ್ಜ್ ಮಾಡಿದ್ರೆ 528 ಕಿಲೋಮೀಟರ್ ಚಲಿಸಬಹುದು. ನಾಲ್ಕು ನಿಮಿಷ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಹೋಗಬಹುದು. ಇದಕ್ಕಾಗಿ ಕಾರಿನಲ್ಲಿ ಅಲ್ಟ್ರಾ ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ. ಅದರಲ್ಲೂ ಈ ಕಾರಿನ ಲುಕ್ ಸೂಪರ್ ಆಗಿದೆ. ಈ ಕಾರಿನ ಬೆಲೆ ಬಂದರೆ 60 ರಿಂದ 70 ಲಕ್ಷ ರೂ. ಆಗಿದೆ.
ನಾಗಾರ್ಜುನ ಕಥೆಗಳ ಆಯ್ಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಮೂವರು ನಿರ್ದೇಶಕರು ಇವರನ್ನು ಭೇಟಿ ಮಾಡಿ ಕಥೆ ಹೇಳಿದ್ದಾರಂತೆ. ಆರ್ ಎಕ್ಸ್ 100 ಖ್ಯಾತಿಯ ಅಜಯ್ ಭೂಪತಿ ಹೇಳಿದ ಕಥೆ ನಾಗ್ ಅವರಿಗೆ ಇಷ್ಟವಾಗಿದೆ. ಅವರ ಜತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಧಿಕೃತ ಘೋಷಣೆ ಬಂದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿಯಲಿದೆ.