

ಹೆಬ್ರಿ: ರಾಷ್ಟ್ರೀಯ ಹೆದ್ದಾರಿಯ ಪೆರ್ಡೂರು ಪಕ್ಕಾಲಿನಿಂದ ಹೆಬ್ರಿಯ ತನಕ ರಸ್ತೆಯಂಚು ಕುಸಿಯುತ್ತಿದ್ದು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುವಾರಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಬದಿ ತಡೆಗೋಡೆ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೆಬ್ರಿ ಶಿವಪುರದ ಬಿಲ್ಲುಬೈಲು ಎಂಬಲ್ಲಿ ಹೆದ್ದಾರಿ ನಿರ್ವಾಣಕ್ಕೆ ಮಣ್ಣು ಅಗೆದಿದ್ದು ಇಲ್ಲಿನ 5 ನಲಿಕೆ ಸಮುದಾಯದ ಮನೆಗಳಿಗೆ ತೆರಳುವ ರಸ್ತೆ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಸಂಚಾರ ಬಂದ್ ಆಗಿದೆ. ಹೆಬ್ರಿಯ ಕನ್ಯಾನದಲ್ಲೂ ರಸ್ತೆ ಅಂಚು ಕುಸಿಯುತ್ತಿದೆ. ಇದರಿಂದಾಗಿ ಹೆದ್ದಾರಿಯಂಚಿನ ಮನೆಮಂದಿಗೆ ಸಂಕಷ್ಟ ಎದುರಾಗಿದೆ. ರಸ್ತೆಯಂಚಿನ ಮನೆಗಳು ಕುಸಿಯುವ ಭೀತಿಯಲ್ಲಿದ್ದು ತಡೆಗೋಡೆ ನಿರ್ವಾಣ ವಾಡಿ ರಕ್ಷಣೆ ನೀಡುವಂತೆ ಸವಾಜ ಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ ಜಿಲ್ಲಾಧಿಕಾರಿಗೆ ಮನವಿ ವಾಡಿದರು.
ತಡಗೋಡೆ ನಿರ್ವಾಣಕ್ಕೆ ಸೂಚನೆ: ಪೆರ್ಡೂರಿನಿಂದ ಹೆಬ್ರಿ ತನಕ ಅಲ್ಲಲ್ಲಿ ರಸ್ತೆ ನಿರ್ವಾಣದ ಕೆಲಸದಿಂದ ಕುಸಿಯುವ ಭೀತಿಯಲ್ಲಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳಿಂದ ಶ್ರೀ ಅನುಮೋದನೆ ಪಡೆದು ತಡೆಗೋಡೆ ನಿರ್ವಾಣ ವಾಡುವಂತೆ ಸೂಚಿಸಿದರು.
ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ಮಂಜುನಾಥ ನಾಯಕ್, ಕಂದಾಯ ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಸಿಯುವ ಹಂತದಲ್ಲಿರುವ ಶಿವಪುರ ಬಿಲ್ಲುಬೈಲಿನ ಮನೆ ಮತ್ತು ರಸ್ತೆ ಬದಿ ತುರ್ತಾಗಿ ತಡೆಗೋಡೆ ನಿರ್ಮಾಣಕ್ಕೆ ಸೂಚಿಸಲಾಗಿದೆ. ಕುಸಿಯುವ ಭೀತಿಯಲ್ಲಿರುವ ಎಲ್ಲ ಸ್ಥಳಗಳನ್ನು ಸರ್ವೆ ನಡೆಸಿ ಶ್ರೀವಾಗಿ ವರದಿ ಸಲ್ಲಿಸಿ ಅನುಮೋದನೆ ಪಡೆಯಬೇಕು. ಮಳೆಯಿಂದಾಗಿ ತುರ್ತು ಪರಿಹಾರ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಹೆದ್ದಾರಿ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ. ಕೆಲವರು ಜಮೀನಿನ ಬಗ್ಗೆ ನ್ಯಾಯಲಯದ ತಡೆಯಾಜ್ಞೆ ತಂದಿರುವುದರಿಂದ ಕೆಲವೆಡೆ ವಿಳಂಬವಾಗುತ್ತಿದೆ.
ಡಾ.ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ