More

    ಮಾಡೆಲ್ ಉರ್ಫಿ ಜಾವೇದ್​​ಗೆ ಕೊಲೆ ಬೆದರಿಕೆ-”ಡ್ರೆಸ್ಸಿಂಗ್ ಸೆನ್ಸ್‌ ಸರಿಮಾಡಿಕೊ ಇಲ್ಲದಿದ್ದರೆ ಹೊಡೆದುರುಳಿಸುತ್ತೇವೆ”

    ಮುಂಬೈ: ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಯಾವಾಗಲೂ ಟೀಕೆಗೆ ಒಳಗಾಗಿದ್ದಾರೆ. ಈಗ ಇದೆ ವಿಚಾರಕ್ಕೆ ಈಗ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ.ಬುಧುವಾರದಂದು ಉರ್ಫಿ ಜಾವೇದ್ ಬೆದರಿಕೆ ಬಂದಿರುವ ಕುರಿತಾಗಿ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.


    ಇದೇ ವಿಚಾರಕ್ಕೆ ಈಗ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ.ಬುಧುವಾರದಂದು ಉರ್ಫಿ ಜಾವೇದ್ ಬೆದರಿಕೆ ಬಂದಿರುವ ಕುರಿತಾಗಿ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.


    ಮೇಲ್ ಕಳಿಸಿರುವ ವ್ಯಕ್ತಿಯು ಪ್ರಮೋದ್ ಸಿಂಗ್ ಎಂದು ಹೇಳಲಾಗಿದ್ದು, ಅವರು ಹಿಂದಿಯಲ್ಲಿ “ಬಹುತ್ ಜಲ್ದಿ ತೇರೆ ಕೋ ಗೋಲಿ ಮಾರ್ ದಿ ಜಾಯೇಗಿ. ಜೋ ತುನೇ ಇಂಡಿಯಾ ಮೇ ಗಂದ್ಗಿ ಫೆಲಾ ರಖೀ ಹೈ.” “ಬಹುತ್ ಜಲ್ದಿ ತೇರೆ ಕೋ ಗೋಲಿ ಮಾರ್ ದಿ ಜಾಯೇಗಿ. ಬಹುತ್ ಜಲ್ದಿ ಮಿಷನ್ ಪುರಾ ಹೋಗಾ, ಜೋ ತುನೇ ಗಂದಗೀ ಫೇಲಾ ರಖೀ ಹೈ ಇಂಡಿಯಾ ಮೇ. ವೋ ಸಬ್ ಗಂದ್ಗಿ ಸಾಫ್ ಹೋ ಜಾಯೇಗೀ” ಎಂದು ಅವರು ಉಲ್ಲೇಖಿಸಿದ್ದಾರೆ. ಈ ಮೇಲ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಉರ್ಫಿ ಜಾವೇದ್ “ನನ್ನ ಜೀವನದಲ್ಲಿ ಇದು ನಿರಂತರವಾಗಿ ನಡೆಯುತ್ತಿರುತ್ತದೆ” ಎಂದು ಬರೆದಿದ್ದಾರೆ.


    ಭಾರತೀಯರನ್ನು ಮಾಲಿನ್ಯಗೊಳಿಸುವುದನ್ನು ನಿಲ್ಲಿಸುವಂತೆ ಒಂದು ವೇಳೆ ಹಾಗೆ ಮಾಡದೆ ಹೋದಲ್ಲಿ ಅವಳನ್ನು ಹೊಡೆದುರುಳಿಸಲಾಗುವುದು ಎಂದು ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.


    ಉರ್ಫಿ ಪೋಸ್ಟ್ ಅನ್ನು ಶೇರ್ ಮಾಡಿದ ತಕ್ಷಣ, ನೆಟಿಜನ್‌ಗಳು ಉರ್ಫಿಯನ್ನು ಬೆಂಬಲಿಸಿದ್ದಾರೆ. ಇಂಟರ್ನೆಟ್ ಬಳಕೆದಾರರು, “ಹೆದರಬೇಡ ಹುಡುಗಿ, ಆದರೆ ಇಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts