

ದಾವಣಗೆರೆ: ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ದಯಾನಂದ ಅವರನ್ನು ನಿವಾಸಿ ವೈದ್ಯರ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ, ಎದುರಾದ ಕೆಲವು ಅನೀರಿಕ್ಷಿತ ಘಟನೆಗಳು ಯುಪಿಎಸ್ಸಿ ಪ್ಲಾಟ್ಫಾರ್ಮ್ಗೆ ತಂದುನಿಲ್ಲಿಸಿವೆ...! ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಳ್ಳುವುದರೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ 615 ರ್ಯಾಂಕ್ ಪಡೆದು ಭಾರತೀಯ ವಿದೇಶಾಂಗ ಸೇವೆಗೆ(ಐಎಎಸ್) ಆಯ್ಕೆಯಾಗಿದ್ದಾರೆ. ಶಿಕ್ಷಣ, ವ್ಯದ್ಯಕೀಯ ಸೇವೆ ಜತೆಗಿನ ಓದು, ಪರೀಕ್ಷೆಗಳಲ್ಲಿನ ವಿವಿಧ ಆಯಾಮಗಳನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರನ ಸಂಡೇ ಗೆಸ್ಟ್ ಆಗಿ ಹಂಚಿಕೊಂಡು ಸ್ಪರ್ಧಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಮಾಡುವ ಕೆಲಸದಲ್ಲಿ ಪ್ರಭಲ ಇಚ್ಛಾಶಕ್ತಿ, ದೃಢ ನಿರ್ಧಾರವಿದ್ದರೆ, ಎದುರಾಗುವ ಯಾವುದೇ ಅಡೆತಡೆಗಳನ್ನು ಮೀರಿ ನಿಲ್ಲಬಹುದು, ಎನ್ನುವುದನ್ನು ದಯಾನಂದ ದೃಢಪಡಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾದೇನಹಳ್ಳಿಯವರಾದ ದಯಾನಂದ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಚನ್ನಗಿರಿಯಲ್ಲಿ, ಪಿಯು ಶಿವಮೊಗ್ಗ, ಹಾಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂಬಿಬಿಎಸ್ ಪದವಿ, ನಿಮ್ಹಾನ್ಸ್ನಲ್ಲಿ ಮನೋವೈದ್ಯಕೀಯ ಶಾಸದಲ್ಲಿ ಡಿಪ್ಲೊಮಾ ಪದವಿ. ತದನಂತರ ದಾವಣಗೆರೆ ಜಿಲ್ಲಾ ಆರೋಗ್ಯ ಆಸ್ಪತ್ರೆಯಲ್ಲಿ ಜಿಲ್ಲಾ ಮನೋವೈದ್ಯರಾಗಿ ಸೇವೆ ಹೀಗೆ ವ್ಯದ್ಯಕೀಯ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ಆಲಂಗಿಸಿದ್ದಾರೆ. ಇದಲ್ಲದೇ ನಿವಾಸಿ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ವೇಳೆ, ನಿವಾಸಿ ವ್ಯದ್ಯರ ಹಕ್ಕುಗಳಿಗೆ ಹೋರಾಟ ಮಾಡುವ ಸಂದರ್ಭ ಎದುರಾದ ಕೆಲವೊಂದು ಘಟನೆಗಳು, ವ್ಯವಸ್ಥೆಯ ಹೋರಗಿದ್ದು ಹೋರಾಟ ಮಾಡುವುದಕ್ಕಿಂತ, ಅದರ ಒಂದು ಭಾಗವಾದರೇ ತಕ್ಕ ಮಟ್ಟಿಗೆ ಅದರಲ್ಲಿ ಬದಲಾವಣೆ ತರಬಹುದು ಎನ್ನುವ ಅಂತಃಕರಣದ ಭಾವ ಮೂಡಿಸಿ ಯುಪಿಎಸ್ಸಿ ಪ್ಲಾಟಾರ್ಮ್ಗೆ ತಂದು ನಿಲ್ಲಿಸಿದವು ಎನ್ನುತ್ತಾರೆ ದಯಾನಂದ. 2022ರಲ್ಲಿ ಯುಪಿಎಸ್ಸಿ ಓದನ್ನು ಪ್ರಾರಂಭಿಸಿದ ಇವರು 2024ರಲ್ಲಿ ಯಶ ಕಂಡಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಂದೆ ಲಕ್ಷ್ಮಣ ನಾಯಕ್ ಕೃಷಿಯಲ್ಲಿ ತೊಡಗಿದ್ದರೆ, ತಾಯಿ ಮಂಜುಳಾ ಗೃಹಿನಿ. ಅಕ್ಕ ಶ್ರುತಿ, ತಂಗಿ ಸಂಗೀತಾ ಅವರನ್ನೊಳಗೊಂಡ ಚಿಕ್ಕ ಕುಟುಂಬ ಇವರದು.
ಪರೀಕ್ಷಾ ಆಯಾಮಗಳನ್ನು ಅರಿಯಲು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸುವುದು ಬಹುಮುಖ್ಯ. ತದನಂತರ ಪ್ರಾಥಮಿಕ ಹಂತದ ಓದೇ ನಮ್ಮ ಅಡಿಪಾಯ. ಆದ್ದರಿಂದ ಗ್ರಹಿಕೆ ತಡವಾದರೂ ಚಿಂತೆಯಿಲ್ಲ, ವಿಷಯಗಳ ಆಳಕ್ಕಿಳಿದೆ ಮುನ್ನಡೆಯಬೇಕು. ಇದರಿಂದ ದೀರ್ಘ ಓದಿನ ಅಗತ್ಯವಿರುವುದಿಲ್ಲ. ಪ್ರಿಲಿಮ್ಸ್ ಮತ್ತು ಮೇನ್ ಹಾಗೂ ಅಧ್ಯಯನ ಕ್ರಮ ಬೇರೆ ಇರಲಿ. ಆದರೆ, ಎರಡೂ ಹಂತಗಳಿಗೆ ಅಭ್ಯಾಸ ಪ್ರಾರಂಭದಿಂದಲೇ ಸಾಗಲಿ. ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ ಮುಖ್ಯ ಪರೀಕ್ಷೆಗೆ ಸಾಕಷ್ಟು ಸಮಯ ನೀಡಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ಸಮಯ ನಿರ್ವಹಣೆ ಮುಖ್ಯವಾಗುತ್ತದೆ.
ಪರೀಕ್ಷೆಗೆ ತಕ್ಕಂತೆ ಮಾಸಿಕ ಸಾಮರ್ಥ್ಯ ಅತ್ಯಗತ್ಯ. 3 ಹಂತಗಳಲ್ಲಿ ನವ ಆಯ್ಕೆ ಪ್ರಕ್ರಿಯೆಯೂ ನಮ್ಮಲ್ಲಿ ವಿಭಿನ್ನ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಪ್ರಿಲಿಮ್ಸ್ ನಮ್ಮಲ್ಲಿ ವಸ್ತುನಿಷ್ಠತೆ ಪರೀಕ್ಷಿಸಿದರೇ, ಮುಖ್ಯ ಪರೀಕ್ಷೆ ನಮ್ಮಲ್ಲಿನ ವಿಶ್ಲೇಷಣಾ ಸಾಮರ್ಥ್ಯವನ್ನು ಬಯಸುತ್ತದೆ. ಸಂದರ್ಶನ ನಮ್ಮಲ್ಲಿನ ಅಭಿಪ್ರಾಯವನ್ನು ಕೇಳುತ್ತದೆ. ಆದ್ದರಿಂದ ಇಲ್ಲಿ ಪ್ರತಿ ಹಂತದ ಪರೀಕ್ಷೆ ವೇಳೆ ಅದಕ್ಕೆ ತಕ್ಕಂತೆ ಒಗ್ಗುವ ಮಾಸಿಕ ಸಾಮರ್ಥ್ಯವನ್ನು ನಾವು ರೂಢಿಸಿಕೊಳ್ಳಬೇಕು ಎನ್ನುವುದು ದಯಾನಂದ ಆಶಯ.
ಮೊದಲಿನಿಂದಲು ಸಾಹಿತ್ಯದ ಆಳವನ್ನು ಸ್ವಲ್ಪವಾದರೂ ಅರಿಯಬೇಕೆನ್ನುವ ಆಸಕ್ತಿ, ಹಾಗೂ ಕನ್ನಡ ಭಾಷೆಯ ಮೇಲಿನ ಪ್ರೇಮ ಐಚ್ಛಿಕ ವಿಷಯವನ್ನಾಗಿ ಆಯ್ದುಕೊಳ್ಳಲು ಕಾರಣವಾಯಿತು. ಅದಕ್ಕೆ ತಕ್ಕಂತೆ ಯುಪಿಎಸ್ಸಿ ಪರೀಕ್ಷೆಯಲ್ಲಿನ ಎರಡೂ ಪ್ರಯತ್ನಗಳಲ್ಲಿ ಈ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಿಸಿಕೊಂಡೆ. ಈ ಹಂತದಲ್ಲಿ ಹೆಚ್ಚಿನ ಅಂಕ ಪಡೆವ ಅಗತ್ಯವಿದೆ. ಆದ್ದರಿಂದ ಇಲ್ಲಿ ಆಯ್ಕೆ ಮಾಡುವ ವಿಷಯದಲ್ಲಿ ಒಂದು ಹೇರಳವಾದ ಪಾಂಡಿತ್ಯವಿರಬೇಕು ಇನ್ನೊಂದು ಅನ್ಹಂತ ಆಸಕ್ತಿ ಇರಬೇಕು. ಈ ಆಸಕ್ತಿಯಿಂದಲೇ ಮಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಕನ್ನಡ ಸಾಹಿತ್ಯಸ ಸಹಕರಿಸಿತು ಎನ್ನುತ್ತಾರೆ ದಯಾನಂದ.
ಸಂದರ್ಶಕರೆದುರಿಗೆ ಹಾಜರಾಗುವವರೆಗೆ ಅಲ್ಲಿ ಯಾವ ಪ್ರಶ್ನೆ ಉದ್ಬವಿಸುತ್ತವೇ ಎನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಸಂದರ್ಶನಕ್ಕೂ ಮುಂಚೆ ಭರ್ತಿಗೊಳಿಸುವ ಡಿಟೈಲ್ಡ್ ಅಪ್ಲಿಕೇಷನ್ ಫಾರ್ಮ್ ನಲ್ಲಿ ನಮೂದಿಸಿದ ವಿಷಯವಾರು ಅಥವಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರಚಲಿತ ವಿದ್ಯಮಾನ, ನೀವು ಬೆಳೆದು ಬಂದ ಪರಿಸರದ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ. ಆದ್ದರಿಂದ ದಿನ ಪತ್ರಿಕೆಗಳ ಓದಿನ ಜತೆ ನಿಮ್ಮ ಮೂಲ ಸ್ಥಳದ ಪರಿಚಯದ ಬಗ್ಗೆ ಹೆಚ್ಚಿನ ಅರಿವು, ಡಿಎಎ್ನಲ್ಲಿ ನಮೂದಿಸಿದ ವಿಷಯದ ಕುರಿತು ಮನನ ಮಾಡಿಕೊಳ್ಳಬೇಕೆನ್ನುವುದು ದಯಾನಂದ ಅಭಿಪ್ರಾಯ.
ಭೀಮಸಿ ಕೋಳೆಪ್ಪನವರ ಬೆಂಗಳೂರು