ಯುಪಿಎಸ್ಸಿ ಕ್ಲಾಸ್​ನಲ್ಲಿ ರೋಹಿತ್ ಶರ್ಮ! 'ಹಿಟ್​ಮ್ಯಾನ್'​ ಬ್ಯಾಟಿಂಗ್​ ವೈಖರಿ ಕೊಂಡಾಡಿದ ಶಿಕ್ಷಕ

ವಿಜಯವಾಣಿ - 2024-08-06T170943.606
Published on

ನವದೆಹಲಿ: ಪ್ರಸಕ್ತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಪಂದ್ಯವನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ಲಂಕಾ ಬೌಲರ್​ಗಳ ಆರ್ಭಟಕ್ಕೆ ಸಂಪೂರ್ಣ ತತ್ತರಿಸಿತು. 32 ರನ್​ಗಳ ಅಂತರದಿಂದ ಶ್ರೀಲಂಕಾ ಎದುರು ಸೋತ ಕ್ಯಾಪ್ಟನ್ ರೋಹಿತ್ ಶರ್ಮ ಪಡೆ, 2ನೇ ಮ್ಯಾಚ್​ ಗೆಲ್ಲುವಲ್ಲಿ ವಿಫಲವಾಯಿತು. ಆದ್ರೆ, ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅದ್ಭುತ ಬ್ಯಾಟಿಂಗ್ ಕೊಡುಗೆ ನೀಡಿರುವ ನಾಯಕ ರೋಹಿತ್​ರನ್ನು ಇದೀಗ ಯುಪಿಎಸ್ಸಿ ಶಿಕ್ಷಕ ತಮ್ಮ ಕೋಚಿಂಗ್ ಕ್ಲಾಸ್​ನಲ್ಲಿ ಗುಣಗಾನ ಮಾಡಿದ ಸಂಗತಿ ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಯುಪಿಎಸ್ಸಿ ಕೋಚಿಂಗ್ ಕ್ಲಾಸ್​ಗೂ ರೋಹಿತ್ ಶರ್ಮಗೂ ಏನು ಸಂಬಂಧ ಎಂಬ ಪ್ರಶ್ನೆ ಸದ್ಯ ಅನೇಕರಲ್ಲಿ ಕಾಡಿದ್ದು, ಇದಕ್ಕೆ ವೈರಲ್ ವಿಡಿಯೋ ಉತ್ತರ ನೀಡಿದೆ. ಯುಪಿಎಸ್ಸಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮಧ್ಯೆ ರೋಹಿತ್​ರ ಬ್ಯಾಟಿಂಗ್​ ಅನ್ನು ಉದಾಹರಣೆಗೆ ತೆಗೆದುಕೊಂಡ ಶಿಕ್ಷಕ, ತಮಾಷೆಯಿಂದಲೇ ವಿದ್ಯಾರ್ಥಿಗಳ ಗಮನಸೆಳೆದಿದ್ದಾರೆ. ಎರಡು ಪಂದ್ಯಗಳಲ್ಲಿಯೂ ಆಕರ್ಷಕ ಇನ್ನಿಂಗ್ಸ್​ ನೀಡಿರುವ ರೋಹಿತ್​, ಏಕದಿನ ಸರಣಿಯಲ್ಲಿ ಒಟ್ಟು 122 ರನ್​ ಕಲೆಹಾಕಿದ್ದಾರೆ.

"ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಿದಾಗ ಪಿಚ್ ರನ್​ ಗಳಿಸಲೆಂದೇ ಮಾಡಿರುವಂತೆ ತೋರುತ್ತದೆ. ಆದರೆ ಇತರ ಬ್ಯಾಟರ್‌ಗಳು ಕ್ರೀಸ್​ಗೆ ಬಂದಾಗ ಅದು ಕಠಿಣ ಎಂದು ಅನಿಸುತ್ತದೆ. ಅದು ಏಕೆ ಎಂಬುದು ನಿಜಕ್ಕೂ ಗೊಂದಲಮಯವಾಗಿದೆ" ಎಂದು ಶಿಕ್ಷಕರು ಹಾಸ್ಯಸ್ಪದವಾಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net