ಪೂರ್ವಭಾವಿ ಪರೀಕ್ಷೆಗೆ ಕೇಂದ್ರ ಬದಲಾವಣೆಗೆ ಅವಕಾಶ ಕಲ್ಪಿಸಿದೆ ಯುಪಿಎಸ್​ಸಿ

UPSC 21 DEC 19
Published on

ನವದೆಹಲಿ: ಅಕ್ಟೋಬರ್ 4 ರಂದು ನಡೆಯಲಿರುವ ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಿದ್ದು, ಈ ಕುರಿತು ಅಧಿಕೃತ ವೆಬ್‌ಸೈಟ್ upc.gov.in ನಲ್ಲಿ ಪ್ರಕಟಣೆ ಹೊರಡಿಸಿದೆ.
upsconline.nic.in ನಲ್ಲಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ, ಪರೀಕ್ಷಾ ಕೇಂದ್ರ ತಿದ್ದುಪಡಿಗಾಗಿ ಜುಲೈ 7 ರಿಂದ 13 ರ ವರೆಗೆ ಅವಕಾಶವಿರುತ್ತದೆ. ಎರಡನೇ ಹಂತದಲ್ಲಿ ಜುಲೈ 20 ರಿಂದ 24 ರ ವರೆಗೆ ಅವಕಾಶವಿರುತ್ತದೆ.

ಒಮ್ಮೆ ಮಾತ್ರ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿದ್ದು, ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುವುದು.
ಅಭ್ಯರ್ಥಿಗಳು ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಯುಪಿಎಸ್​ಸಿ ಪ್ರತಿ ವರ್ಷ ಐಎಎಸ್, ಐಎಫ್​ಎಸ್, ಐಆರ್​ಎಸ್ , ಐಪಿಎಸ್ ಇತ್ಯಾದಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ವರ್ಷ ಮೇ 31ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ದೇಶಾದ್ಯಂತ ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈಗ ಅಕ್ಟೋಬರ್ 4 ರಂದು ಪರೀಕ್ಷೆ ನಡೆಯಲಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net