ಬಹು ನಿರೀಕ್ಷಿತ ಯುಪಿಎಸ್​ಸಿ -ಸಿಎಂಎಸ್ ಪರೀಕ್ಷಾ ಅಧಿಸೂಚನೆ ಪ್ರಕಟ

UPSC
Published on

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​​ಸಿ) ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ (ಸಿಎಂಎಸ್) ಯ ಅಧಿಸೂಚನೆಯನ್ನು ವೆಬ್​ಸೈಟ್​​​ನಲ್ಲಿ ಬಿಡುಗಡೆ ಮಾಡಿದೆ.

ಎಂಬಿಬಿಎಸ್ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ವರ್ಷ ಈ ಪರೀಕ್ಷೆಯ ಮೂಲಕ ಒಟ್ಟು 559 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

* ಕೆಟಗರಿ 1-ಕೇಂದ್ರ ಆರೋಗ್ಯ ಸೇವೆಗಳಲ್ಲಿ ಜೂನಿಯರ್ ಸ್ಕೇಲ್ ಹುದ್ದೆಗಳು-182.

* ಕೆಟಗರಿ 2-ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ವೈದ್ಯಾಧಿಕಾರಿ-300 ಹುದ್ದೆಗಳು.

ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆ ಸೇವಾ ಕೇಂದ್ರದಲ್ಲಿ ಸಹಾಯಕ ವೈದ್ಯಾಧಿಕಾರಿ-66.

ದೆಹಲಿ ಮುನ್ಸಿಪಲ್ ಕೌನ್ಸಿಲ್​​ನಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್-4.

ಪೂರ್ವ,ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಗ್ರೇಡ್- II-7 ಹುದ್ದೆಗಳಿವೆ.

ಸಂಪೂರ್ಣ ಅಧಿಸೂಚನೆಯು ಯುಪಿಎಸ್ಸಿಯ ಅಧಿಕೃತ ಸೈಟ್​​ upc.gov.in ನಲ್ಲಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು upconline.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆ ದಿನವಾಗಿರುತ್ತದೆ.

ಸಲ್ಲಿಸಿದ ಆನ್‌ಲೈನ್ ಅರ್ಜಿಗಳನ್ನು ಆಗಸ್ಟ್ 25 ರಿಂದ ಆಗಸ್ಟ್ 31 ರವರೆಗೆ ಹಿಂಪಡೆಯಲು ಅವಕಾಶವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net