ಐಟಿಐ ಪಾಸಾಗಿದ್ದೀರಾ? ಒಎನ್​ಜಿಸಿಯಲ್ಲಿ 4182 ಅಪ್ರೆಂಟಿಸ್​​ಷಿಪ್​​ ಸ್ಥಾನಗಳಿವೆ

ONGC
Published on

ನವದೆಹಲಿ: ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ಒಎನ್‌ಜಿಸಿ) ಅಪ್ರೆಂಟಿಸ್ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

4182 ಸ್ಥಾನಗಳಿವೆ. ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ದೇಶಾದ್ಯಂತ 21 ಕಾರ್ಯ ಕೇಂದ್ರಗಳಲ್ಲಿ ನಡೆಯಲಿದೆ. ಪದವಿ, ಡಿಪ್ಲೊಮಾ, ಐಟಿಐ ಆದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ಪೂರೈಸಿರಬೇಕು.

ಅರ್ಹ ಅಭ್ಯರ್ಥಿಗಳು ongcindia.com ನಲ್ಲಿ ಆನ್‌ಲೈನ್‌ನಲ್ಲಿ ಆಗಸ್ಟ್ 17 ರವರೆಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ 24 ರಂದು ಫಲಿತಾಂಶ ಪ್ರಕಟಣೆಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್​ಸೈಟ್​​ನಲ್ಲಿರುವ ಸಂಪೂರ್ಣ ನೇಮಕಾತಿ ಅಧಿಸೂಚನೆ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net