ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಭೆ

08
Published on

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್‌ನ ಸಭೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವಠಾರದಲ್ಲಿ ಜರುಗಿತು.

ಶ್ರೀ ಕಾಳಿಕಾಂಬಾ ಸುವರ್ಣ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ನೂರು ತಾಳಮದ್ದಳೆಗಳ ಶ್ರೀ ಮಹಾಭಾರತ ಸರಣಿಯಲ್ಲಿ ಆ.23ರಿಂದ ಸೆ.7ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ದ.ಕ. ಜಿಲ್ಲೆಯ ಆಹ್ವಾನಿತ 18 ಯಕ್ಷಗಾನ ತಂಡಗಳ ತಾಳಮದ್ದಳೆ ಮತ್ತು ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾಹಿತಿ ನೀಡಿದರು.

ಟ್ರಸ್ಟ್ ಪದಾಧಿಕಾರಿಗಳಾದ ಬಿ.ಸುಬ್ರಹ್ಮಣ್ಯ ರಾವ್, ಮಹಾಲಿಂಗೇಶ್ವರ ಭಟ್ ಕೆ., ಅಂಬಾ ಪ್ರಸಾದ್ ಪಾತಾಳ, ಕೆ.ಬಿ.ಶ್ರೀಪತಿ ಭಟ್, ಪದ್ಮನಾಭ ಕುಲಾಲ್ ಇಳಂತಿಲ, ಶ್ರುತಿ ವಿಸ್ಮಿತ್, ಬಿ.ಸುರೇಶ್ ರಾವ್, ಗೀತಾ ಕುದ್ದಣ್ಣಾಯ, ಕೈಲಾರ್ ರಾಜಗೋಪಾಲ ಭಟ್, ಕಿಶೋರ್ ಜೋಗಿ, ಜಯರಾಮ ಶೆಟ್ಟಿ, ಲೋಕೇಶ್ ಬೆತ್ತೋಡಿ, ಉಮೇಶ ಶೆಣೈ ರಾಮನಗರ, ಸುರೇಶ ಪುತ್ತೂರಾಯ, ಕೆ.ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಭಾಸ್ಕರ ಬಾರ್ಯ ಉಪಸ್ಥಿತರಿದ್ದರು.

ರಾಮನಗರದ ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಕಲಾವಿದ ಪಾತಾಳ ವೆಂಕಟರಮಣ ಭಟ್ ಮತ್ತು ಶ್ರೀ ಕಾಳಿಕಾಂಬಾ ಸಂಸ್ಥೆಯ ಸ್ಥಾಪಕರಾದ ವೈದ್ಯ ಕೆ.ಶೀನಪ್ಪ ಶೆಟ್ಟಿ ಗೌರವಾರ್ಥ ನುಡಿನಮನ, ಕಲಾವಿದ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಸುಳ್ಯ ಹರಿಹರ ಪಲ್ಲತಡ್ಕದ ಕೊಂಬೋಟು ಮನೆತನದ ‘ನೀಲಪದ್ಮ ಪ್ರಶಸ್ತಿ’ ಪ್ರದಾನ ನಡೆಸಲಾಗುವುದು ಎಂದು ಮಾಹಿತಿ ನೀಡಲಾಯಿತು.

ಟ್ರಸ್ಟ್ ಕೋಶಾಧಿಕಾರಿ ಶ್ರುತಿ ವಿಸ್ಮಿತ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಿ.ಸುಬ್ರಹ್ಮಣ್ಯ ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net