More

    ಎರಡು ತಿಂಗಳಲ್ಲಿ 11 ಬಿಲಿಯನ್​ ತಲುಪಿದ ಯುಪಿಐ ವಹಿವಾಟು: ಆರ್​ಬಿಐ

    ನವದೆಹಲಿ: ಮೊಬೈಲ್ ಪಾವತಿಗಳವೇದಿಕೆ ಏಕೀಕೃತ ಪಾವತಿ ಇಂಟರ್ಫೇಸ್ (UPI)ಎರಡು ತಿಂಗಳ ಅವಧಿಯಲ್ಲಿ 11.4 ಶತಕೋಟಿ ವಹಿವಾಟುಗಳ ಸಾಧನೆ ಮಾಡಿದ್ದು ಹೊಸ ದಾಖಲೆಯನ್ನು ಮಾಡಿದೆ ಎಂದು ಆರ್​ಬಿಐ ತಿಳಿಸಿದೆ.

    ಅಕ್ಟೋಬರ್ 2023 ರಲ್ಲಿ 11 ಬಿಲಿಯನ್ ಯುಪಿಐ ವಹಿವಾಟುಗಳನ್ನು ಮಾಡಲಾಗಿದೆ. ಗ್ರಾಹಕರು ಮೊಬೈಲ್‌ನಲ್ಲಿ ಯುಪಿಐ ಬಳಸಿಕೊಂಡು ರಿಯಲ್ ಟೈಮ್‌ನಲ್ಲಿ ತಡೆರಹಿತ ಪಾವತಿಗಳನ್ನು ನಡೆಸುತ್ತಿದ್ದಾರೆ ಎಂದು ಅಪೆಕ್ಸ್​ ಬ್ಯಾಂಕ್ ತಿಳಿಸಿದೆ.

    ಇದನ್ನೂ ಓದಿ: ಸಕ್ಸಸ್​ ಸ್ಟೋರಿ; ಯುಪಿಎಸ್​ಸಿ ಪರೀಕ್ಷೆಯಲ್ಲಿ 35 ಬಾರಿ ಸೋತು-ಗೆದ್ದಿರುವ ವಿಜಯ್​ ವರ್ಧನ್​

    ಯುಪಿಐ ಮೂಲಕ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸೌಲಭ್ಯವು ದೃಢವಾದ ಅಳವಡಿಕೆಯನ್ನು ಪ್ರದರ್ಶಿಸಿದೆ, ಅಕ್ಟೋಬರ್ 2023 ಕ್ಕಿಂತ 2022 ರಲ್ಲಿ ಹಣ ವರ್ಗಾವಣೆ ದ್ವಿಗುಣವಾಗಿದೆ. ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ಗಳು, ಕಾಂಟ್ಯಾಕ್ಟ್‌ಲೆಸ್ ಕಾರ್ಡ್‌ಗಳು ಮತ್ತು UPI-ಲಿಂಕ್ಡ್ ಕ್ರೆಡಿಟ್ ಕಾರ್ಡ್‌ಗಳ ಬಳಕೆಯಲ್ಲೂ ಹೆಚ್ಚಳವಾಗಿದೆ.

    ಹಬ್ಬದ ಸೀಸನ್‌ಗಳಾದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಯುಪಿಐ ಪ್ಲಾಟ್‌ಫಾರ್ಮ್ ಇತರ ತಿಂಗಳುಗಳಿಗಿಂತ ಹೆಚ್ಚಿನ ಮೇಲುಗೈ ಸಾಧಿಸುತ್ತದೆ, ಇದು ಯುಪಿಐ ಅನ್ನು ಇನ್ನಷ್ಟು ಬಲಿಷ್ಟಗೊಳಿಸಲಿದೆ. ಯುಪಿಐ ಇಂದು ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಕಂಡುಕೊಂಡಿದೆ. ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೆ ಬದಲಿ ವ್ಯವಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts