Success Story; ಯುಪಿಎಸ್​ಸಿ ಪರೀಕ್ಷೆಯಲ್ಲಿ 35 ಬಾರಿ ಸೋತು-ಗೆದ್ದಿರುವ ವಿಜಯ್​ ವರ್ಧನ್​

IAS Vijay Verma

ನವದೆಹಲಿ: ಐಎಎಸ್​​ ಅಧಿಕಾರಿಯಾಗುವುದು ಹಲವಾರು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಯುಪಿಎಸ್​ಸಿ ಸಿವಿಲ್​ ಸರ್ವೀಸ್​​ ಪರೀಕ್ಷೆಯನ್ನು ಎದುರಿಸಲು ಲಕ್ಷಾಂತರ ಮಂದಿ ಆಕಾಂಕ್ಷಿಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ಅಧ್ಯಾಯನವನ್ನು ನಡೆಸುತ್ತಾರೆ. ಇಂದು ನಾವು ಐಎಎಸ್ ಪರೀಕ್ಷೆಯನ್ನು ಪಾಸಾಗುವ ಮೊದಲು ಹಲವಾರು ಬಾರಿ ವಿಫಲತೆಯನ್ನು ಕಂಡು 35ನೇ ಪ್ರಯತ್ನದಲ್ಲಿ ಗೆದ್ದಿರುವ ಐಎಎಸ್​ ಅಧಿಕಾರಿ ವಿಜಯ ವರ್ಧನ್​ ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿದುಕೊಳ್ಳೋಣ.

ತಪ್ಪುಗಳನ್ನು ಮಾಡುವುದು ಗೆಲುವಿನ ಮಂತ್ರದ ಒಂದು ಭಾಗವಾಗಿದೆ. ವಿಜಯ್ ವರ್ಧನ್ ಸರ್ಕಾರಿ ಉದ್ಯೋಗಗಳಿಗಾಗಿ ಪ್ರಯುತ್ನಿಸಿ 35 ಬಾರಿ ವಿಫಲರಾದರು ಕೂಡ ಛಲ ಬಿಡದೆ ಅಂತಿಮವಾಗಿ ಯುಪಿಎಸ್​ಸಿಯಲ್ಲಿ AIR 104ನೇ ಸ್ಥಾನವನ್ನು ಪಡೆಯುವ ಮೂಲಕವಾಗಿ ಪರೀಕ್ಷಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಐಎಎಸ್ ವಿಜಯ ವರ್ಧನ್ 35 ಬಾರಿ ಪರೀಕ್ಷೆಯಲ್ಲಿ ಅನುತ್ತಿರ್ಣನಾಗಿದ್ದರು ಕುಗ್ಗದೆ ತಮ್ಮ ತಪ್ಪುಗಳಿಂದ ಕಲಿತು ಪ್ರತಿ ಸೋಲಿನ ನಂತರ ಹೆಚ್ಚಿನ ಶ್ರಮಪಟ್ಟರು.ಇದರ ಪ್ರತಿಫಲವಾಗಿ UPSC CSE ಮತ್ತು IPS ಪರೀಕ್ಷೆಯಲ್ಲಿ ಉರ್ತ್ತೀಣರಾಗಿ, ಪ್ರಸ್ತುತ ಐಎಎಸ್ ಅಧಿಕಾರಿಯಾಗಲು ತರಬೇತಿ ಪಡೆಯುತ್ತಿದ್ದಾರೆ.

ವಿಜಯ ವರ್ಧ್​ನ್​ರವರು ತಮ್ಮ ಬಾಲ್ಯದ ಶಿಕ್ಷಣವನ್ನು ಸಿರ್ಸಾದಲ್ಲಿ ಮುಗಿಸಿ, ಹಿಸಾರ್​ನಲ್ಲಿ ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​ನಲ್ಲಿ ಬಿಟೆಕ್​ ಪದವಿ ಪಡೆದರು. ನಂತರ ಯುಪಿಎಸ್​ಸಿ ಅಧ್ಯಯನಕ್ಕಾಗಿ ದೆಹಲಿಗೆ ತೆರಳಿ, ಅಧ್ಯಯಾನ ನಡೆಸುತ್ತೀರುವಾಗ ಪಿಸಿಎಸ್​,ಯುಪಿಪಿಎಸ್​ಸಿ, ಎಸ್​ಎಸ್​ಸಿ ಮತ್ತು ಸಿಜಿಎಲ್​ ಸೇರಿದಂತೆ 30 ಪರೀಕ್ಷೆಗಳಿಗೆ ಹಾಜರಾಗಿದ್ದರು. ಆದರೆ ಆ ಯಾವ ಪರೀಕ್ಷೆಯಲ್ಲಿಯೂ ಉತ್ತಿರ್ಣರಾಗದೆ ಸೋಲು ಅನುಭವಿಸಿದರು.

IAS Vijay Verma

ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್​ ಸೇರಲು ಮುಂದಾದ ನಟಿ ವಿಜಯಶಾಂತಿ

ಪರೀಕ್ಷೆಯಲ್ಲಿಯೂ ವಿಫಲರಾಗುತ್ತ ಬಂದರು ಹಿಡಿದ ಛಲ ಮಾತ್ರ ಬಿಡಲಿಲ್ಲ. ಸತತ ಪ್ರಯತ್ನಗಳು ಮಾಡುತ್ತಲೇ ಬಂದರು. 2014ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆಯನ್ನು ಪ್ರಯತ್ನಿಸಿದರು ಆದರೆ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸತತವಾಗಿ ಒಂದರ ನಂತರ ಒಂದರಂತೆ ನಾಲ್ಕು ಬಾರಿ ಪ್ರಯತ್ನಿಸಿದರು ಆದರೆ ಪ್ರತಿ ಬಾರಿಯೂ ಇವರ ಲಕ್​ ಕೈ ಕೊಡುತ್ತಿತ್ತು.

ಸತತ ಪ್ರಯತ್ನಗಳಲ್ಲಿ ತೊಡಗಿದ್ದ ವಿಜಯ್ ವರ್ಧನ್ 2018 ರಲ್ಲಿ ಪ್ರಯತ್ನಗಳಿಗೆ ಗೆಲುವನ್ನು ಸಾಧಿಸುವಂತೆ ಮಾಡಿತು. ಎಐಆರ್ 104 ಅನ್ನು ಪಡೆದುಕೊಂಡರು ಆದರೆ ಐಪಿಎಸ್ ಅಧಿಕಾರಿಯ ಹುದ್ದೆಯನ್ನು ಪಡೆದುಕೊಂಡರು ಸಹ ಅವರು ಸಂತೋಷ ಪಡದೆ ಮತ್ತೆ 2021 ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಮತ್ತೆ ಕಾಣಿಸಿಕೊಂಡು ಐಎಎಸ್ ಪರೀಕ್ಷೆಯಲ್ಲಿ ಉತ್ತಿರ್ಣರಾಗುವ ಮೂಲಕವಾಗಿ ತನ್ನ ಕನಸನ್ನು ನನಸಾಗಿಸಿಕೊಂಡರು.

ಈ ಮೂಲಕವಾಗಿ ಇಂದಿನ ಯುವ ಪೀಳಿಗೆಗೆ ಸೋಲೆ ಗೆಲುವಿನ ಮೆಟ್ಟಿಲು ಎನ್ನುವ ಮಾತನ್ನು ಸಾರಿದ್ದಾರೆ. ಸತತ 35 ಬಾರಿ ಪರೀಕ್ಷೆಯಲ್ಲಿ ಸೋಲು ಕಂಡಿದ್ದವರು ಇಂದು ​ಐಎಎಸ್ ಅಧಿಕಾರಿಯಾಗಿ ನೇಮಕಗೊಂಡು ಹಲವಾರು ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿದ್ದಾರೆ.

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…