More

    ವಿಶ್ವಕಪ್​ನಲ್ಲಿ ಭಾರತ ಆಡಿರುವ ಪ್ರತಿಯೊಂದು ಪಂದ್ಯದ್ಲಲು ಫಿಕ್ಸಿಂಗ್​ ನಡೆದಿದೆ ಎಂದ ಪಾಕ್ ಮಾಜಿ ಕ್ರಿಕೆಟಿಗ; ವ್ಯಾಪಕ ಟೀಕೆಗೆ ಗುರಿ

    ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ತಾನಾಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಫಿನಾಲೆ ಪ್ರವೇಶೀಸಿದ್ದು, ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇತ್ತ ಭಾರತ ತಂಡ ಅಜೇಯವಾಗಿ ಫಿನಾಲೆ ಪ್ರವೇಶಿಸಿದ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಇದನ್ನು ಸಹಿಸದ ನೆರೆಯ ಪಾಕಿಸ್ತಾನ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಟೀಕೆಗೆ ಗುರಿಯಾಗುತ್ತಿದೆ.

    ಇದೀಗ ಹೊಸ ಆರೋಪ ಒಂದರಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಆಕಿಬ್​ ಜಾವೇದ್​ ಭಾರತ ಆಡಿರುವ ಪ್ರತಿ ಒಂದು ಪಂದ್ಯದಲ್ಲೂ ಬಿಸಿಸಿಯ ಟಾಸ್​ ಫಿಕ್ಸಿಂಗ್​ ಮಾಡುವ ಮೂಲಕ ಸಹಕರಿಸಿದೆ ಎಂದು ಆರೋಪಿಸಿದ್ದಾರೆ. ಇವರ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ವ್ಯಕ್ತವಾಗಿದೆ.

    ಖಅಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಆಕಿಬ್ ಜಾವೇದ್, ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿ ಬಿಸಿಸಿಐ ಹಾಗೂ ಟೀಂ ಇಂಡಿಯಾ ಪ್ರತಿಯೊಂದು ಪಂದ್ಯದಲ್ಲಿ ಫಿಕ್ಸಿಂಗ್​ ಮಾಡಿದ್ದು, ಆಡಿರುವ ಅಷ್ಟು ಪಂದ್ಯಗಳಲ್ಲಿ ಸುಲಭವಾಗಿ ಹೇಗೆ ಗೆಲ್ಲಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಟೀಸರ್​ನಲ್ಲೇ ಕುತೂಹಲ ಮೂಡಿಸಿದ ನೈಜ ಘಟನೆ ಆಧಾರಿತ ‘ಕೈವ’

    ಬುಧವಾರ ನಡೆದ ಮೊದಲ ಸೆಮಿಫಿನಾಲೆ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್​ ಶರ್ಮಾ ಕಾಯಿನ್​ ಫ್ಲಿಪ್​ ಮಾಡಿದರು. ಆದರೆ, ಅದು ತುಂಬಾ ದೂರು ಬಿದ್ದಿತ್ತು. ಇದನ್ನು ಗಮನಿಸಿದ ರೆಫ್ರಿ ನಾಯಕನ ಆಯ್ಕೆಗೆ ಬಿಡುತ್ತಾರೆ. ಇದು ಹೇಗೆ ಸಾಧ್ಯ. ಒಂದು ವೇಳೆ ಹಾಗೆ ಆಗಿದ್ದಲ್ಲಿ ಅಂತಿಮವಾಗಿ ರೆಫ್ರಿ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಇಲ್ಲಿ ಹಾಗೆ ಮಾಡಿಲ್ಲ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದ್ದಾರೆ.

    ಇದಲ್ಲದೆ 2011ರ ವಿಶ್ವಕಪ್​ನಲ್ಲಿ ಭಾರತ ಶ್ರೀಲಂಕಾ ಎದುರು ಫಿಕ್ಸಿಂಗ್​ ಮಾಡಿ ಫೈನಲ್​ ಗೆದ್ದಿದ್ದು, ಹಾಲಿ ವಿಶ್ವಕಪ್​ನಲ್ಲಿ ಹೊಸದಾಗಿ ಪಿಚ್​ಗಳನ್ನು ಸಿದ್ದಪಡಿಸದೆ ಹಳೆಯದನ್ನೆ ಉಪಯೋಗಿಸಲಾಗುತ್ತಿದೆ. ಐಸಿಸಿಅನ್ನು ಬಿಸಿಸಿಐ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದು, ಇದರ ಬಗ್ಗೆ ಮಾತನಾಡಲು ಯಾರು ಮುಂದೆ ಬರುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ದೂರು ಸಲ್ಲಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಆಕಿಬ್​ ಜಾವೇದ್ ತಿಳಿಸಿದ್ದಾರೆ.

    ಇತ್ತ ಪಾಕಿಸ್ತಾನದ ಮಾಜಿ ಆಟಗಾರನ ಸರಣಿ ಆರೋಪದ ಬೆನ್ನಲ್ಲೇ ಕೆರಳಿದ ನೆಟ್ಟಿಗರು, ಕುಣಿಯಲಾರದವರು ನೆಲ ಡೊಂಕು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ಕಳಪೆ ಪ್ರದರ್ಶನದಿಂದ ಲೀಗ್​ ಹಂತದಲ್ಲೇ ಹೊರಬಿದ್ದ ನೀವು ಅಜೇಯವಾಗಿ ಗೆದ್ದ ತಂಡದ ವಿರುದ್ಧ ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ದಯವಿಟ್ಟು ಈ ರೀತಿ ಮಾತನಾಡುವುದನ್ನು ಬಿಟ್ಟು ಇರುವ ಕೆಲಸ ಮಾಡಿ ಎಂದು ನೆಟ್ಟಿಗರು ತಿರುಗೇಟು ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts