More

    ಇದೇನು ಮಹಾ ಆಕ್ಟಿಂಗ್..?; ಪ್ರಿಯಾಂಕಾ ಅಭಿನಯದ ಬಗ್ಗೆ ಉಪೇಂದ್ರ ವ್ಯಾಖ್ಯಾನ

    ಬೆಂಗಳೂರು: ‘ದಿನಾ ಮನೆಯಲ್ಲಿ ಇದಕ್ಕಿಂತ ಅದ್ಭುತವಾದ ನಟನೆ ನೋಡ್ತೀನಿ. ಇದೇನು ಆಕ್ಟಿಂಗ್? ಸಿಸಿಟಿವಿ ತೋರಿಸ್ತೀನಿ. ಅದು ನಿಜವಾದ ಆಕ್ಟಿಂಗ್ …’- ಉಪೇಂದ್ರ ಹೀಗೆ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಜೋರು ಚಪ್ಪಾಳೆ, ನಗು. ಅವರ ಮಾತು ಕೇಳಿ ಪಕ್ಕದಲ್ಲಿದ್ದ ಸುದೀಪ್ ಸಹ ಗಹಗಹಿಸಿ ನಗುತ್ತಿದ್ದರು. ಪ್ರಿಯಾಂಕಾ ಉಪೇಂದ್ರಗೆ ಒಳಗೊಳಗೆ ಅದೆಷ್ಟು ಕೋಪ ಬರುತ್ತಿತ್ತೋ ಗೊತ್ತಿಲ್ಲ. ಆದರೆ, ಅವರೂ ನಗುತ್ತಲೇ ಇದ್ದರು. ಕೊನೆಗೆ ಪ್ರಿಯಾಂಕಾ ಅವರ ಅಭಿನಯ ಹೇಗಿದೆ ಎಂದು ಹೇಳಿ ಎಂದು ನಿರೂಪಕಿಯಿಂದ ಒತ್ತಾಯ ಹೆಚ್ಚಾದಾಗ, ಉಪೇಂದ್ರ ಎದುರಿಗಿದ್ದ ಪ್ರೇಕ್ಷಕರನ್ನು ನೋಡಿದರು. ಅವರು ಚೆನ್ನಾಗಿದೆ ಎಂದರು. ‘ಜನ ಹೇಳಿದ ಮೇಲೆ ಮುಗೀತು …’ ಎಂದು ಹೇಳಿ ನಗುತ್ತಾ ಮೈಕು ಕೊಟ್ಟರು.

    ಇದೆಲ್ಲ ಆಗಿದ್ದು, ಪ್ರಿಯಾಂಕಾ ಅಭಿನಯದ ‘1980’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಅತಿಥಿಗಳಾಗಿ ಉಪೇಂದ್ರ ಮತ್ತು ಸುದೀಪ್ ಬಂದಿದ್ದರು. ಇಬ್ಬರೂ ಇದೊಂದು ಒಳ್ಳೆಯ ಪ್ರಯತ್ನ ಎಂದರು. ಎರಡನೇ ಲಾಕ್​ಡೌನ್ ಪ್ರಾರಂಭಕ್ಕೂ ಮುನ್ನವೇ ಮುಗಿದಿದ್ದ ‘1980’ ಈಗ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಅಕ್ಟೋಬರ್ 15ಕ್ಕೆ ಚಿತ್ರವು ನಮ್ಮ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾತನಾಡಿದ ಪ್ರಿಯಾಂಕಾ, ‘ಇದು ನನ್ನ ಮಟ್ಟಿಗೆ ವಿಶೇಷವಾದ ಚಿತ್ರ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್. ಚಿತ್ರದ ಬಹುತೇಕ ಚಿತ್ರೀಕರಣ ಶನಿವಾರಸಂತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಮಕ್ಕಳನ್ನು ಉಪ್ಪಿ ನೋಡಿಕೊಂಡರು. ನಾನು ಪಾರ್ಟ್​ಟೈಮ್ ನಟಿ ಮಾತ್ರ. ಮುಖ್ಯವಾಗಿ ನಾನೊಬ್ಬ ತಾಯಿ. ಮನೆಯಲ್ಲಿ ಎಲ್ಲರ ಪ್ರೀತಿ ಮತ್ತು ಪ್ರೋತ್ಸಾಹದಿಂದ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿದೆ’ ಎಂದರು. ಪ್ಯಾರಲೆಲ್ ಯೂನಿವರ್ಸ್ (ಪರ್ಯಾಯ ಜಗತ್ತು) ಎಂಬ ವಿಭಿನ್ನ ಕಥಾಹಂದರದ ಕುರಿತಾದ ಈ ಚಿತ್ರವನ್ನು ರಾಜ್ಕಿರಣ್ ನಿರ್ದೇಶಿಸಿದರೆ, ಪೂಜಾಶ್ರೀ ನಿರ್ವಿುಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ಜತೆಗೆ ಶರಣ್ಯಾ ಶೆಟ್ಟಿ, ಅರವಿಂದ್ ರಾವ್, ರಮೇಶ್ ಪಂಡಿತ್ ಮುಂತಾದವರು ನಟಿಸಿದ್ದಾರೆ.

    ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ?; ಕೊನೆಗೂ ಯಾವಾಗ ಅಂತ ಹೇಳಿ ತಲೆಗೆ ಹುಳ ಬಿಟ್ಟ ರಿಯಲ್​ ಸ್ಟಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts