ಫೇಸ್‌ಬುಕ್‌ ಗೆಳತಿ ನೋಡಲು ಪಾಕ್​ಗೆ ಹೋದ ಭಾರತೀಯ! ಯುವತಿ ನೋಡಲು ಹೋದವನು ಏನಾದಾ ಗೊತ್ತಾ? Facebook Love

Facebook Love
Published on

ಉತ್ತರ ಪ್ರದೇಶ : ( Facebook Love ) ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ (Pakistan) ಯುವತಿ ಜತೆಗೆ ಸ್ನೇಹ ಬೆಳೆಸಿದ್ದ ವ್ಯಕ್ತಿಯೊಬ್ಬ  ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.

ಅಲಿಗಢ ಜಿಲ್ಲೆಯ ಯುವಕ ಫೇಸ್‌ಬುಕ್‌ನಲ್ಲಿ ( Facebook ) ಪಾಕಿಸ್ತಾನ ಯುವತಿಯನ್ನು ಪರಿಚಯ  ಮಾಡಿಕೊಂಡಿದ್ದಾನೆ. ಇಬ್ಬರ ಸ್ನೇಹ ಪ್ರೀತಿಗೆ ( Love ) ತಿರುಗಿದೆ. ಈಕೆಯನ್ನು ಭೇಟಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ನಂತರ ಅಕ್ರಮವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಎಂಟ್ರಿಯಾಗಿದ್ದಾನೆ.

ನಡೆದಿದ್ದೇನು?:

ತಪಾಸಣೆ ವೇಳೆ ಭಾರತದಿಂದ ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಆರೋಪದ ಮೇಲೆ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು (30) ಎಂದು ಗುರುತಿಸಲಾಗಿದೆ.

ಡಿಸೆಂಬರ್ 27ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಬಾದಲ್ ಬಾಬು ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಪಾಕಿಸ್ತಾನದ ವಿದೇಶಿಯರ ಕಾಯಿದೆ, 1946ರ ಸೆಕ್ಷನ್ 13 ಮತ್ತು 14ರ ಅಡಿಯಲ್ಲಿ ಬಾದಲ್ ಬಾಬು ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟ್​ಗೆ ಹಾಜರುಪಡಿಸಲಾಯಿತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರು ಜನವರಿ 10, 2025ರಂದು ಬಿಡುಗಡೆಯಾಗಲಿದ್ದಾನೆ.

ಈ ಹಿಂದೆ ಕೂಡಾ ಸೀಮಾ ಹೈದರ್​ ಎನ್ನುವ ಮಹಿಳೆ ತನ್ನ ಮಕ್ಕಳ ಜತೆ ಅಕ್ರಮವಾಗಿ ಪಾಕಿಸ್ತಾನ ಗಡಿ ದಾಟಿ ಭಾರತದ ಯುವಕನಿಗಾಗಿ ಬಂದಿದ್ದರು. ಇದೀಗ ಭಾರತದಲ್ಲೇ ನೆಲೆಸಿರುವ ಈಕೆ ಪ್ರೀಯಕರನ ಮಗುವಿಗೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೆಲವು ದಿನಗ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net