Video Viral | ತನಗೆ ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ತೋರಿಸಲು ಈತ ಮಾಡಿದ್ದೇನು ನೋಡಿ..

uttar pradesh
up man brought snake to hospital
Published on

ಉತ್ತರಪ್ರದೇಶ: ಉತ್ತರಪ್ರದೇಶದ(Uttarpradesh) ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ವೈದ್ಯರಿಗೆ(Doctors) ತನಗೆ ಕಚ್ಚಿದ ಹಾವು ಯಾವುದು ಎಂದು ತೋರಿಸಲು ತಂದಿದ್ದ ಬಾಕ್ಸ್ ನೋಡಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗಳು ಒಮ್ಮೆ ಅಚ್ಚರಿಗೊಂಡಿದ್ದಾರೆ.

ವೈದ್ಯಕೀಯ ಆಸ್ಪತ್ರೆಗೆ ಓಡೋಡಿ ಬಂದ ವ್ಯಕ್ತಿಯೊಬ್ಬ, ತುರ್ತು ವಿಭಾಗದಲ್ಲಿದ್ದ ವೈದ್ಯರನ್ನು ಸಂಪರ್ಕಿಸಿ ತನ್ನ ಕಾಲಿಗೆ ಹಾವು ಕಚ್ಚಿದೆ. ಆ ಹಾವನ್ನು ಈ  ಬಾಕ್ಸ್​ನೊಳಗೆ ಇಟ್ಟಿದ್ದೇನೆ ನೋಡಿ ಎಂದು ತೋರಿಸಿದ್ದಾನೆ. ಬಾಕ್ಸ್​ನೊಳಗಿದ್ದ ಮಂಡಲ ಹಾವನ್ನು(Russels Viper) ನೋಡಿದ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಬ್ಬೆರಗಾಗಿದ್ದಾರೆ.

ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹಾವುಗಳಿಂದ ಎಚ್ಚರವಾಗಿರಿ ಎಂದು ಹೇಳಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net