ಕಾರನ್ನು ಕದ್ದ ತಂದೆ: ಮಗನ ಜೀವ ತೆಗೆದ ಪೊಲೀಸರು..?

gun
Published on

ಇರಾನ್​: ತಂದೆಯೊರ್ವ ಕಾರನ್ನು ಕದ್ದ ಕಾರಣಕ್ಕಾಗಿ ಮಗನನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವ ಘಟನೆ ಇರಾನ್‌ನ ನೈಋತ್ಯ ಖುಜೆಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.

ಮೃತ ಬಾಲಕನನ್ನು 9 ವರ್ಷದ ಮೊರ್ತೆಜಾ ಜೆರ್ಗಾನಿ ಎಂದು ಗುರುತಿಸಲಾಗಿದ್ದು, ಬಾಲಕನ ತಂದೆ ಕಾರನ್ನು ಕದ್ದ ನಂತರ ಪೊಲೀಸರು ಗುಂಡು ಹಾರಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಪೊಲೀಸರು, ಕಾರು ಕದ್ದ ವ್ಯಕ್ತಿಯು ಕಳ್ಳತನದಿಂದ ಹಿಡಿದು ಮಾದಕವಸ್ತು ಕಳ್ಳಸಾಗಣೆಯವರೆಗೆ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದ. ಈತ ಕಾರನ್ನು ಕದ್ದ ನಂತರ ಹುಡುಗನೊಂದಿಗೆ ಪರಾರಿಯಾಗಲು ಹೊರಟಿದ್ದ. ಈ ವೇಳೆ ಕದ್ದ ವಾಹನವನ್ನು ಅಧಿಕಾರಿಗಳು ನಿಲ್ಲಿಸಲು ಪ್ರಯತ್ನಿಸಿದರು.

ಆದರೆ ವ್ಯಕ್ತಿಯು ಕಾರನ್ನು ನಿಲ್ಲಿಸದೇ ಇದ್ದಾಗ, ಪೊಲೀಸರು ಗುಂಡು ಹಾರಿಸಿದ್ದರಿಂದ ಅದು ಬಾಲಕನಿಗ ತಗುಲಿದ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ಪೊಲೀಸರು ಯಾವುದೇ ಸೂಚನೆಯನ್ನು ನೀಡದೆ ಗುಂಡು ಹಾರಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದುದು ಅಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬಾಲಕನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ನೆಟ್ಟಿಗರು ಪೊಲೀಸರ ಕ್ರಮದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ನವೆಂಬರ್‌ನಲ್ಲಿ 9 ವರ್ಷದ ಕಿಯಾನ್ ಪಿರ್ಥಲಾಕ್ ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಮಗುವಿನ ಸಾವಿಗೆ ಭದ್ರತಾ ಪಡೆಗಳೇ ಕಾರಣ ಎಂದು ಮಗುವಿನ ತಾಯಿ ಆರೋಪಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net