ಡಬಲ್ ಬಾಡಿಗೆ ವಿಚಾರಕ್ಕೆ ಗಲಾಟೆ; ಚಾಕು ಇರಿದು ಪ್ರಯಾಣಿಕನ ಜೀವ ತೆಗೆದ ಆಟೋ ಚಾಲಕ

Auto
Published on

ಬೆಂಗಳೂರು: ಆಟೋ ಬಾಡಿಗೆ ವಿಚಾರಕ್ಕೆ ಜಗಳ ಆರಂಭವಾಗಿ, ಚಾಲಕ ಇಬ್ಬರು ಪ್ರಯಾಣಿಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಯಶವಂತಪುರದ ಸೋಪ್ ಫ್ಯಾಕ್ಟರಿ ಬಳಿ ನಡೆದಿದೆ. ಘಟನೆಯಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಮತ್ತೊರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಅಸ್ಸಾಂ ಮೂಲದ ಅಹ್ಮದ್(28) ಮೃತಪಟ್ಟ ಯುವಕ.

ಅಸ್ಸಾಂ ಮೂಲದ ಅಹ್ಮದ್ ಮತ್ತು ಅಯೂಬ್ ಇಬ್ಬರು ಸಹೋದರರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಯಶವಂತಪುರದಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಆಟೋ ಮೂಲಕ ಮನಗೆ ತೆರಳಿದ್ದಾರೆ. ಈ ವೇಳೆ ಚಾಲಕ ಅಶ್ವಥ್ ಡಬಲ್ ಬಾಡಿಗೆ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಪ್ರಯಾಣಿಕರು ಹಾಗೂ ಚಾಲಕನ ನಡುವೆ ಗಲಾಟೆ ಆರಂಭವಾಗಿದೆ.

ಡಬಲ್ ಬಾಡಿಗೆ ವಿಚಾರಕ್ಕೆ ಗಲಾಟೆ ನಡೆದಿದ್ದು, ಚಾಲಕ ಅಶ್ವತ್ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆಗೈದಿದ್ದಾನೆ. ಘಟನೆಯಲ್ಲಿ ಅಹ್ಮದ್ ಸಾವನ್ನಪ್ಪಿದರೆ, ಅಯೂಬ್ ಆಸ್ಪತ್ರೆ ಸೇರಿದ್ದಾನೆ. ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net