ಅಪರಾಧ ತಡೆಗೆ ಮುಂದಾದ ನಗರ ಪೊಲೀಸ್ ಆಯುಕ್ತ; ಹೊಯ್ಸಳ ವಾಹನದಲ್ಲಿ ಸಿಟಿ ರೌಂಡ್ಸ್

B Dayanand
Published on

ಬೆಂಗಳೂರು: ರಾಜಧಾನಿಯಲ್ಲಿ ಅಪರಾಧ ಚಟುವಟಿಗೆಳಿಗೆ ನಿಯಂತ್ರಣ ಹೇರಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮುಂದಾಗಿದ್ದಾರೆ. ಇದಕ್ಕಾಗಿ ಅವರು ತುರ್ತು ಸ್ಪಂದನೆ (ನಮ್ಮ 112) ಹಾಗೂ ಗಸ್ತು ವ್ಯವಸ್ಥೆಯ ಕಾರ್ಯವೈಖರಿಯನ್ನು ತಿಳಿಯಲೆಂದು ಹೊಯ್ಸಳ ವಾಹನದಲ್ಲಿ ನಗರದಲ್ಲಿ ಸಂಚಾರ ನಡೆಸಿದ್ದಾರೆ.

ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೊಯ್ಸಳ ವಾಹನದಲ್ಲಿ ಸಂಚರಿಸಿ ಪರಿಶೀಲಿಸಿದ್ದಾರೆ. ಸ್ವತಃ ಅವರೇ 112 ಸಹಾಯವಾಣಿ ಕರೆ ಸ್ವೀಕರಿಸಿ ಸಮಸ್ಯೆ ಬಗ್ಗೆ ಆಲಿಸಿದ್ದಾರೆ. ಜತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳಿಗೆ ವಾರಕ್ಕೊಮ್ಮೆ ಹೊಯ್ಸಳ ವಾಹನದಲ್ಲಿ ಸಂಚರಿಸಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

112 ತುರ್ತು ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ? ಎಷ್ಟು ನಿಮಿಷದಲ್ಲಿ ಕರೆ ಸ್ವೀಕರಿಸಲಾಗುತ್ತದೆ? ಬಳಿಕ ಸ್ಥಳಕ್ಕೆ ತೆರಳಿ ಸಮಸ್ಯೆ ಹೇಗೆ ಬಗೆಹರಿಸಲಾಗುತ್ತದೆ? ಇತ್ಯಾದಿ ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಅಧಿಕಾರಿಗಳಿಗೆ ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ವಾರಾಂತ್ಯದಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಜನಸಂಚಾರ ಹೆಚ್ಚಿರುತ್ತದೆ. ಹೀಗಾಗಿ ನಿನ್ನೆ ಸಂಜೆ 4 ಗಂಟೆಯಿಂದ 8 ಗಂಟೆ ತನಕ ತನಕ ಹೊಯ್ಸಳ ವಾಹನದಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಹೊಯ್ಸಳ ವಾಹನದಲ್ಲಿ ಮಳೆಗಾಲ ಆರಂಭವಾದ ಹಿನ್ನೆಲೆ ಹಗ್ಗ, ವುಡ್ ಕಟಿಂಗ್, ಮತ್ತಿತರ ವಸ್ತುಗಳನ್ನು ಇಟ್ಟಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net