VIDEO| ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ ಯೋಗಿ ಆದಿತ್ಯನಾಥ್​ ಹೇಳಿಕೆ

Yogi adityanath
Published on

ಲಕ್ನೋ: ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಪುತ್ರ ಅಸಾದ್​ ಅಹ್ಮದ್​ ಹಾಗೂ ಶಾರ್ಪ ಶೂಟರ್​ ಗುಲಾಮ್​ ಮೊಹಮ್ಮದ್​ನನ್ನು ಉತ್ತರಪ್ರದೇಶ ಪೊಲೀಸರು ಹಾಗೂ STF ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಿದ್ದಾರೆ.

ಇನ್ನು ಅತೀಕ್​ ಪುತ್ರ ಹಾಗೂ ಆತನ ಸಹಚರನ ಎನ್​ಕೌಂಟರ್​ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದ್ದು ಕೆಲವರು ಪೊಲಿಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರೆ. ಕೆಲವರು ಇದು ನಕಲಿ ಎನ್​ಕೌಂಟರ್​ ಎಂದು ಹೇಳಿದ್ದಾರೆ.

ವಿಡಿಯೋ ವೈರಲ್​

ಇನ್ನು ಫೆಬ್ರವರಿ ತಿಂಗಳಲ್ಲಿ ನಡೆದ ಉತ್ತರಪ್ರದೇಶ ಬಜೆಟ್​ ಅಧಿವೇಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಅಣಗಳಲ್ಲಿ ವೈರಲ್​ ಆಗಿದ್ದು ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ಗೆ ಹೇಳುತ್ತಿರುವುದು ಕಂಡು ಬರುತ್ತದೆ.

ಆರೋಪಿ ಸ್ಥಾನದಲ್ಲಿರುವ ಅತೀಕ್​ ಅಹ್ಮದ್​ ಈ ಹಿಂದೆ ಸಮಾಜವಾದಿ ಪಕ್ಷದವರು ಎಂದು ಮರೆಯಬಾರದು. ನಾವು ಮಾಫಿಯಾದವರ ಬೆನ್ನು ಮೂಲೆ ಮುರಿಯುತ್ತಿದ್ದೇವೆ ಅಷ್ಟೇ. ಆ ವ್ಯಕ್ತಿ ಉತ್ತರಪ್ರದೇಶದಲ್ಲಿ ಮಾಫಿಯಾಗೆ ಒಂದು ತರಹದ ಗಾಡ್​​ಫಾದರ್​ ಇದ್ದ ಹಾಗೆ ಅವರ ರಕ್ತದಲ್ಲಿಯೇ ಅಪರಾಧವಿದೆ. ನಾವು ಮಾಫಿಯಾವನ್ನು ಬುಡ ಸಮೇತ ಕಿತ್ತುಹಾಕುವುದರಲ್ಲಿ ಬೇರೆ ಮಾತಿಲ್ಲ ಎಂದು ಹೇಳಿದ್ದರು.

ಪರ-ವಿರೋಧ ಚರ್ಚೆ

ಇನ್ನು ಅತೀಕ್​ ಅಹ್ಮದ್​ ಪುತ್ರ ಅಸಾದ್​ ಹತ್ಯೆ ಕುರಿತು ಪರ ವಿರೋಧ ಚರ್ಚೆಯಾಗುತ್ತಿದ್ದು ಕೆಲವರು ಪೊಲೀಸರ ನಡೆಯನ್ನು ಶ್ಲಾಘಿಸಿದರೆ ಇನ್ನು ಕೆಲವರು ಇದು ನಕಲಿ ಎಂದು ಆರೋಪಿಸಿದ್ದಾರೆ.

ಇನ್ನು ಅಸಾದ್​ ಎನ್ಕೌಂಟರ್​ ಕುರಿತು ಪ್ರತಿಕ್ರಿಯಿಸಿರುವ ಉಮೇಶ್​ ಪಾಲ್​ ಪತ್ನಿ ಮತ್ತು ತಾಯಿ ತಮ್ಮ ಪತಿ ಹಾಗೂ ಮಗನ ಸಾವಿಗೆ ನ್ಯಾಯ ದೊರೆತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ಇದು ನಕಲಿ ಎನ್​ಕೌಂಟರ್​ ಆಗಿದ್ದು ಆಡಳಿತ ಪಕ್ಷವು ಜನತೆಯ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಎಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net