

ಲಕ್ನೋ: ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್ಸ್ಟಾರ್ ಅತೀಕ್ ಅಹ್ಮದ್ ಪುತ್ರನನ್ನು ಉತ್ತರಪ್ರದೇಶದ ಪೊಲೀಸರು ಹೊಡೆದುರುಳಿಸಿದ್ದಾರೆ.
ಮೃತರನ್ನು ಅಸಾದ್ ಅಹ್ಮದ್ ಹಾಗೂ ಶಾರ್ಪ್ ಶೂಟರ್ ಗುಲಾಮ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸದ್ ಹಾಗೂ ಗುಲಾಮ್ ಪೊಲೀಸರ ಹಿಟ್ಲಿಸ್ಟ್ನಲ್ಲಿದ್ದರು. ಈ ಇಬ್ಬರನ್ನು ಪತ್ತೆ ಮಾಡಿ ಕೊಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ಈ ಇಬ್ಬರು ಆರೋಪಿಗಳು ಝಾನ್ಸಿಯಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು DYSPಗಳಾದ ನಾವೆಂದು, ವಿಮಲ್ ಹಾಗೂ UPSTF ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಎನ್ಕೌಂಟರ್ ಮಾಡಿದ್ದಾರೆ.
ಗುರುವಾರ ಅತೀಕ್ ಅಹ್ಮದ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಪಿ ನಾನು ಇಂದು ಬುದಕಿದ್ದೇನೆ ಎಂದರೆ ಅದು ಮಾಧ್ಯಮದವರಿಂದ ಎಂದು ಹೇ:ಳಿದ್ಧಾನೆ.