ಯಾರೂ ಯೋಚಿಸದ ಜಾಗದಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡ ವ್ಯಕ್ತಿ; 91 ಸಾವಿರ ವೀಕ್ಷಣೆ ಕಂಡ ವಿಡಿಯೋ

selfi
Published on

ಸ್ವಿಟ್ಜರ್ಲೆಂಡ್‌: ಆ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಕುಳಿತುಕೊಂಡಿರುವ ಸ್ಥಳ ನೋಡಿದರೆ ಉಸಿರು ಬಿಗಿಹಿಡಿಯುತ್ತದೆ. ಇಂದಿನ ಕಾಲದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅಥವಾ ರೀಲ್ಸ್​​​ ಮಾಡಲು ಜನರು ಯಾವುದೇ ಹಂತಕ್ಕೂ ಹೋಗಲು ಸಿದ್ಧರಾಗಿದ್ದಾರೆ. ಕೆಲವರು ಲೈಕ್ಸ್​​​ ಮತ್ತು ಕಾಮೆಂಟ್‌ಗಳಿಗಾಗಿ ತಮ್ಮ ಜೀವನ, ಜೀವದ ಬಗ್ಗೆ ಕಾಳಜಿ ಕೂಡ ವಹಿಸುವುದಿಲ್ಲ.

ಈ ವ್ಯಕ್ತಿ ಕೂಡ ಇದೇ ರೀತಿ ಮಾಡಿದ್ದಾನೆ. ಯಾರೂ ಯೋಚಿಸದ ಜಾಗದಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾನೆ. ವಿಡಿಯೋ ನೋಡುವವರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ನೀವು ವ್ಯಕ್ತಿಯ ಸುತ್ತಲೂ ಅಪಾಯಕಾರಿ ದೃಶ್ಯವನ್ನು ಸಹ ಕಾಣಬಹುದು.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಎನೆಝೇಟರ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಶೇರ್ ಮಾಡಿದ ನಂತರ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು 91 ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಅಷ್ಟೇ ಅಲ್ಲ, ಎರಡು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ರೀಟ್ವಿಟ್ ಮಾಡುತ್ತಿದ್ದಾರೆ.

ಜನರು ಕೂಡ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಒರ್ವ ಬಳಕೆದಾರ, 'ಬಹಳ ಅಪಾಯಕಾರಿ' ಸ್ಥಳ ಎಂದು ಹೇಳಿದರೆ, ಮತ್ತೆ ಕೆಲವರು 'ಇದು ನಿಜವಾಗಲು ಸಾಧ್ಯವಿಲ್ಲ' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ವಿಡಿಯೋದ ಶೀರ್ಷಿಕೆ ಹೀಗಿದೆ, 'ಸ್ವಿಟ್ಜರ್ಲೆಂಡ್‌ನ ಆಲ್ಫಸ್ಟೈನ್ ಪರ್ವತ ಶ್ರೇಣಿಯ ಮೇಲೆ ತೆಗೆದ ಸೆಲ್ಫಿ'.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net