

ದೇಶದಲ್ಲಿ ನಾಳೆ (ಅಕ್ಟೋಬರ್-1)ರಿಂದ ಅನ್ಲಾಕ್-5ನೇ ಹಂತ ಶುರುವಾಗಲಿದ್ದು, ತತ್ಸಂಬಂಧ ಮಾರ್ಗಸೂಚಿಯನ್ನು ಕೇಂದ್ರ ಗೃಹಸಚಿವಾಲಯ ಬಿಡುಗಡೆ ಮಾಡಿದೆ.
ಕೊವಿಡ್-19 ಸೋಂಕು ವ್ಯಾಪಕವಾಗಿ ಪ್ರಸರಣ ಆಗುತ್ತಿದ್ದರೂ, ಕೆಲವು ರಾಜ್ಯಗಳು ಲಾಕ್ಡೌನ್, ಕರ್ಫ್ಯೂವಿನಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸುತ್ತಿದ್ದರೂ ಕೇಂದ್ರ ಸರ್ಕಾರ ಲಾಕ್ಡೌನ್ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುತ್ತಿದೆ. ಆರ್ಥಿಕತೆ ದೃಷ್ಟಿಯಿಂದ ಹೆಚ್ಚಿನ ಚಟುವಟಿಕೆಗಳು ಪ್ರಾರಂಭವಾಗುವುದು ಅನಿವಾರ್ಯ ಎಂದು ಹೇಳಿರುವ ಕೇಂದ್ರ ಸರ್ಕಾರ ಅನ್ಲಾಕ್-5ನೇ ಹಂತದಲ್ಲಿ , ಬಹುಜನರ ನಿರೀಕ್ಷೆಯಂತೆ ಸಿನಿಮಾ ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳನ್ನು ತೆರೆಯಲು ಅನುಮತಿ ನೀಡಿದೆ. ಇದನ್ನೂ ಓದಿ: ‘ಯೋಗಿ ರಾಜ್ಯದಲ್ಲಿ ಯಾವುದೇ ವಾಹನ..ಯಾವ ಸಮಯದಲ್ಲಿ ಬೇಕಾದ್ರೂ ಉರುಳಬಹುದು’ ಎಂದ ಬಿಜೆಪಿ ಮುಖಂಡ
ಹಾಗೇ ಶಾಲೆಗಳು, ಕಾಲೇಜು, ಶೈಕ್ಷಣಿಕ, ಕೋಚಿಂಗ್ ಸಂಸ್ಥೆಗಳನ್ನು ಪ್ರಾರಂಭಿಸುವ ಬಗ್ಗೆಯೂ ಅನ್ಲಾಕ್-5ರಲ್ಲಿ ಉಲ್ಲೇಖಿಸಲಾಗಿದೆ. ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆಯಾ ಸರ್ಕಾರಗಳ ಶಿಕ್ಷಣ ಇಲಾಖೆಗಳು ಸೂಕ್ತ ಎಸ್ಒಪಿ ತಯಾರಿಸಿ, ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳ ಪ್ರಾರಂಭ ಮಾಡಬಹುದು ಎಂದು ಹೇಳಲಾಗಿದೆ.(ಏಜೆನ್ಸೀಸ್)