

ಲಖನೌ: ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್ರೇಪ್ನ್ನು ಇನ್ನೊಂದು ನಿರ್ಭಯಾ ಕೇಸ್ ಎಂದೇ ಹೇಳಲಾಗುತ್ತಿದೆ. ನಾಲ್ವರು ಕಾಮುಕರನ್ನೂ ಬಂಧಿಸಲಾಗಿದ್ದು, ವಿಚಾರಣೆಯೂ ನಡೆಯುತ್ತಿದೆ. ಹಾಗೇ ರಾಜ್ಯದಲ್ಲಿ ಆಕ್ರೋಶ, ಪ್ರತಿಭಟನೆಗಳೂ ಹೆಚ್ಚಾಗಿವೆ.
ಇನ್ನು ಈ ಬಗ್ಗೆ ಬಿಜೆಪಿ ನಾಯಕ ಕೈಲಾಶ್ ವಿಜಯ್ವಾರ್ಗಿಯಾ ಅವರು ಒಂದು ಮಹತ್ವದ, ಮಾರ್ಮಿಕ ಹೇಳಿಕೆಯನ್ನು ನೀಡಿದ್ದಾರೆ. ಇದು ವಿವಾದಕ್ಕೂ ಕಾರಣವಾಗಿದೆ. ದಲಿತ ಯುವತಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿದ ಮೇಲ್ವರ್ಗದ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ ಕೈಲಾಶ್, ಪರೋಕ್ಷವಾಗಿ ಆರೋಪಿಗಳ ಎನ್ಕೌಂಟರ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳೇ, ಸದ್ಯಕ್ಕೆ ನೀವು ಶಾಲಾ-ಕಾಲೇಜುಗಳಿಗೆ ಹೋಗುವಂತಿಲ್ಲ!
ಅತ್ಯಾಚಾರ ಆರೋಪಿಗಳನ್ನು ಬಂಧಿಸಲಾಗಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಆರೋಪಿಗಳು ಖಂಡಿತ ಜೈಲು ಸೇರುತ್ತಾರೆ. ಇಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಯೋಗಿ ರಾಜ್ಯದಲ್ಲಿ ಯಾವ ವಾಹನ, ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಬೇಕಾದರೂ ಉರುಳಬಹುದು ಎಂಬುದು ನನಗೂ ಗೊತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಜುಲೈನಲ್ಲಿ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಎನ್ಕೌಂಟರ್ ಮಾಡಿದ ಪ್ರಕರಣವನ್ನು ನೆನಪಿಸಿದ್ದಾರೆ. ಇದನ್ನೂ ಓದಿ: ನಿರುದ್ಯೋಗ ಹೆಚ್ಚುತ್ತಿರುವುದೇ ಅತ್ಯಾಚಾರ ಜಾಸ್ತಿಯಾಗಲು ಕಾರಣ: ಸುಪ್ರೀಂ ಮಾಜಿ ನ್ಯಾಯಮೂರ್ತಿ
ಬಂಧಿಸಲು ಹೋಗಿದ್ದ 8 ಕಾನ್ಪುರ ಪೊಲೀಸರನ್ನು ವಿಕಾಸ್ ದುಬೆ ಸಹಚರರು ಕೊಂದಿದ್ದರು. ನಂತರ ಮಧ್ಯಪ್ರದೇಶದ ಉಜ್ಜಯಿನಿ ದೇಗುಲದಲ್ಲಿ ದುಬೆಯನ್ನು ಬಂಧಿಸಿ, ಉತ್ತರ ಪ್ರದೇಶಕ್ಕೆ ಕರೆತರುವ ಮಾರ್ಗದಲ್ಲಿ ಎನ್ಕೌಂಟರ್ ಮಾಡಲಾಗಿತ್ತು. ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ಪೊಲೀಸ್ ವಾಹನ ಪಲ್ಟಿ ಆಯಿತು..ಈ ವೇಳೆ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್ಕೌಂಟರ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದರು. ಇದೀಗ ರೇಪ್ ವಿಚಾರ ಮಾತನಾಡುವಾಗ ಆ ಎನ್ಕೌಂಟರ್ ಆದ ಸಂದರ್ಭವನ್ನು ಬಿಜೆಪಿ ಮುಖಂಡ ನೆನಪಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. (ಏಜೆನ್ಸೀಸ್)