ಪಟನಾದಲ್ಲಿ ಮೊಳಗಿದ ವಿಪಕ್ಷಗಳ ಒಗ್ಗಟ್ಟಿನ ಮಂತ್ರ: ಒಂದು ಕ್ಷೇತ್ರಕ್ಕೆ ಒಮ್ಮತದ ಒಬ್ಬನೇ ಅಭ್ಯರ್ಥಿ ನಿಲ್ಲಿಸಲು ಚರ್ಚೆ

| ಕೆ. ರಾಘವ ಶರ್ಮ ನಿಡ್ಲೆ, ನವದೆಹಲಿ

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಪಣ ತೊಟ್ಟು, ವಿಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಮಹತ್ವದ ತೀರ್ವನವನ್ನು ಬಿಹಾರದ ಪಟನಾದಲ್ಲಿ ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಹಾಗಾದಾಗ ಮಾತ್ರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು’ ಎಂದು ಪಟನಾ ಸಭೆಯಲ್ಲಿ ರ್ಚಚಿಸಿವೆ. ಕಾಂಗ್ರೆಸ್, ಜೆಡಿಯು, ಆರ್​ಜೆಡಿ, ಸಮಾಜವಾದಿ, ಎಡಪಕ್ಷಗಳು, ಟಿಎಂಸಿ, ಡಿಎಂಕೆ, ಆಮ್ ಆದ್ಮಿ ಪಾರ್ಟಿ, ಜೆಕೆಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್, ಶಿವಸೇನೆ ಸೇರಿ ಒಟ್ಟು 17 ರಾಜಕೀಯ ಪಕ್ಷಗಳ 32 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 15 ಪಕ್ಷಗಳು ಒಗ್ಗಟ್ಟಿನ ಸ್ಪರ್ಧೆಗೆ ಒಪ್ಪಿಗೆ ಕೊಟ್ಟಿವೆ. ಒಂದು ಕ್ಷೇತ್ರದಿಂದ ವಿಪಕ್ಷದ ಒಬ್ಬ ಅಭ್ಯರ್ಥಿ ಸ್ಪರ್ಧಿಸಬೇಕು. ಹೀಗಾದಾಗ ಮಾತ್ರ ಮತ ವಿಭಜನೆಗೆ ಲಗಾಮು ಹಾಕಿ, ಬಿಜೆಪಿಯನ್ನು ಸೋಲಿಸಬಹುದು ಎನ್ನುವುದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಸಲಹೆ.

2014 ಮತ್ತು 2019ರ ಲೋಕಸಭೆ ಚುನಾವಣೆಗೆ ಮುನ್ನವೂ ವಿಪಕ್ಷಗಳು ಮಹಾಮೈತ್ರಿ ರೂಪಿಸುವ ವಿಫಲ ಯತ್ನ ಮಾಡಿದ್ದವು. ಆದರೆ, ಈಗ ರಾಜಕೀಯ ಸನ್ನಿವೇಶಗಳು ಬದಲಾಗಿದ್ದು, ಮುಖ್ಯವಾಗಿ, ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿವಿರೋಧಿ ಕೂಟಕ್ಕೆ ಭರವಸೆಯ ಆಶಾಕಿರಣವಾಗಿ ಪರಿಣಮಿಸಿದೆ. ಹೀಗಾಗಿ, ನಿತಿಶ್ ಕುಮಾರ್ ಕರೆದಿದ್ದ ಸಭೆಯಲ್ಲಿ ವಿಪಕ್ಷಗಳ ನಾಯಕರು ಲವಲವಿಕೆಯಿಂದ ಪಾಲ್ಗೊಂಡರು. ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರೋಧಿಸದಿದ್ದರೆ ನಾವು ಮಹಾಮೈತ್ರಿಯಲ್ಲಿ ಇರುವುದಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ ಕೇಜ್ರಿವಾಲ್ ಬೆದರಿಕೆ ಹಾಕಿದ್ದರೂ, ಅವರನ್ನು ಸಮಾಧಾನಪಡಿಸಲು ಇತರೆ ನಾಯಕರು ಮುಂದಾಗಲಿ ದ್ದಾರೆನ್ನಲಾಗಿದೆ. ಏತನ್ಮಧ್ಯೆ, ವಿಪಕ್ಷಗಳದ್ದು ಕೇವಲ ಫೋಟೋ ಸೆಷನ್ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಟೀಕಿಸಿದ್ದು, ಸ್ವಾರ್ಥ ಅಜೆಂಡಾಗಳನ್ನು ಹೊಂದಿರುವ ಪಕ್ಷಗಳು ಒಂದಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿರುವ ಸಚಿವೆ ಸ್ಮೃ ಇರಾನಿ, ‘ಕೇವಲ ಕಾಂಗ್ರೆಸ್​ನಿಂದ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ವಾಸ್ತವ ಒಪ್ಪಿಕೊಂಡಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು. ಮೋದಿಯವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಈ ಪಕ್ಷಗಳು ಕಂಡುಕೊಂಡಿವೆ’ ಎಂದು ಮಾತಿನೇಟು ನೀಡಿದ್ದಾರೆ.

ಶಿಮ್ಲಾದಲ್ಲಿ ಮುಂದಿನ ಸಭೆ: ‘ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಸ್ಪರ್ಧಿಸಲು ವಿಪಕ್ಷಗಳು ತೀರ್ವನಿಸಿವೆ. ನಮ್ಮ ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯ ಲಿದೆ. ಭವಿಷ್ಯದ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಲಾಗುವುದು. ವಿವಿಧ ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ನೀಡಬೇಕೆಂದು ಶಿಮ್ಲಾ ಸಭೆಯಲ್ಲಿ ರ್ಚಚಿಸಲಾ ಗುವುದು’ ಎಂದು ನಿತಿಶ್ ಕುಮಾರ್ ತಿಳಿಸಿದ್ದಾರೆ. ಜುಲೈ 10 ಅಥವಾ 12ಕ್ಕೆ ಶಿಮ್ಲಾದಲ್ಲಿ ಸಭೆ ಕರೆಯಲು ಉದ್ದೇಶಿಸಲಾಗಿದೆ.

ಬಿಜೆಪಿಯಿಂದಲೂ ಮಿತ್ರಯತ್ನ: ವಿಪಕ್ಷಗಳು ಮಹಾಮೈತ್ರಿ ದೃಢಗೊಳಿಸುವ ತಂತ್ರ ಅನುಸರಿಸುತ್ತಿರುವ ಮಧ್ಯೆ ಬಿಜೆಪಿ ಕೂಡ ತನ್ನ ಹಳೆಯ ಮಿತ್ರರೊಂದಿಗಿನ ಸ್ನೇಹಕ್ಕೆ ಮರುಜೀವ ನೀಡಲು ತೆರೆಮರೆಯಲ್ಲೇ ಯತ್ನಿಸುತ್ತಿದೆ. ಬಿಹಾರದಲ್ಲಿ ಆಡಳಿತಾರೂಢ ಮೈತ್ರಿ ತೊರೆದಿರುವ ಹಿಂದುಸ್ತಾನಿ ಅವಾಮಿ ಮೋರ್ಚಾದ ನಾಯಕ, ಮಾಜಿ ಸಿಎಂ ಜೀತನ್ ರಾಮ್ ಮಾಂಜಿ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಎನ್​ಡಿಎ ಮೈತ್ರಿಕೂಟ ಸೇರಿಕೊಳ್ಳಲಿದ್ದಾರೆನ್ನಲಾಗಿದೆ. ಆಂಧ್ರಪ್ರದೇಶದ ಟಿಡಿಪಿ ಕೂಡ ಎನ್​ಡಿಎ ಮೈತ್ರಿಕೂಟಕ್ಕೆ ಮರುಸೇರ್ಪಡೆಯಾಗುವ ಲೆಕ್ಕಾಚಾರದಲ್ಲಿದೆ. ಎನ್​ಡಿಎಗೆ ಬಾಹ್ಯ ಬೆಂಬಲ ನೀಡುತ್ತಲೇ ಬಂದಿರುವ ಒಡಿಶಾದ ಬಿಜೆಡಿ, ವಿಪಕ್ಷಗಳ ಸಭೆಯಿಂದ ದೂರವುಳಿದಿದೆ. ಕೇಂದ್ರ ಕೃಷಿ ಕಾಯ್ದೆಗಳಿಂದಾಗಿ ಎನ್​ಡಿಎ ಸಖ್ಯ ತೊರೆದಿದ್ದ ಪಂಜಾಬ್​ನ ಶಿರೋಮಣಿ ಅಕಾಲಿದಳ ಪಕ್ಷ ಕೂಡ ಚುನಾವಣೆಗೆ ಎನ್​ಡಿಎ ಸೇರಿಕೊಂಡರೆ ಅಚ್ಚರಿ ಇಲ್ಲ.

ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರದಿಂದ ನಿರಂತರ ದಾಳಿ ನಡೆಯುತ್ತಿದೆ. ಇದು ಸಿದ್ಧಾಂತಗಳ ಹೋರಾಟ. ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನಮ್ಮ ಸಿದ್ಧಾಂತವನ್ನು ರಕ್ಷಿಸಲು ನಮ್ಯತೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಇದು ಒಂದು ಪ್ರಕ್ರಿಯೆಯಾಗಿದ್ದು, ಅದನ್ನು ಮುಂದುವರಿಸಲಿದ್ದೇವೆ.

| ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಕಾಂಗ್ರೆಸ್ ಸಿದ್ಧಾಂತವನ್ನು ಬಿಹಾರದಿಂದ ಎಂದಿಗೂ ಬೇರ್ಪಡಿಸಲು ಸಾಧ್ಯವಿಲ್ಲ. ಬಿಹಾರವನ್ನು ಗೆದ್ದರೆ ಭಾರತವನ್ನು ಗೆಲ್ಲುತ್ತೇವೆ. ವಿರೋಧ ಪಕ್ಷದ ನಾಯಕರನ್ನು ಒಟ್ಟುಗೂಡಿಸುವಲ್ಲಿ ರಾಹುಲ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ.

| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ (ಸಭೆಗೆ ಮುನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ)

ಪಟನಾದಲ್ಲಿ ಆರಂಭಗೊಳ್ಳುವ ಸಭೆಗಳು ಚಳವಳಿಯಾಗಿ ರೂಪುಗೊಂಡ ನಿದರ್ಶನವನ್ನು ದೇಶ ಕಂಡಿದೆ. ಇದಕ್ಕೆ ಜೆಪಿ ಚಳವಳಿಯೇ ಒಂದು ಉದಾಹರಣೆ. ಇದನ್ನು ವಿಪಕ್ಷಗಳ ಹೋರಾಟ ಎಂದು ಬಿಂಬಿಸುವ ಬದಲು ಬಿಜೆಪಿಯ ಸರ್ವಾಧಿಕಾರ ಮತ್ತು ದ್ವೇಷ ರಾಜಕಾರಣದ ವಿರುದ್ಧದ ಒಗ್ಗಟ್ಟಿನ ಚಳವಳಿ ಎಂದು ಬಿಂಬಿಸಬೇಕು.

| ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಮದುವೆಯಾಗಲು ಸಲಹೆ!

ರಾಜಕೀಯ ಕಿಡಿನುಡಿಗಳ ಮಧ್ಯೆ ಹಾಸ್ಯಚಟಾಕಿಗಳಿಂದಲೂ ಗುರುತಿಸಿಕೊಂಡಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ವಿವಾಹದ ಬಗ್ಗೆ ಪ್ರಸ್ತಾಪಿಸಿ, ‘ನೀವು ಮದುವೆಯಾಗಬೇಕು ಎಂದು ಬಹಳ ಮೊದಲೇ ಸಲಹೆ ನೀಡಿದ್ದೆ. ಆದರೆ, ನನ್ನ ಮಾತು ಕೇಳಲಿಲ್ಲ. ಬೇಗ ಮದುವೆಯಾಗಿ, ನಾವು ಆ ಸಮಾರಂಭದಲ್ಲಿ ಭಾಗಿಯಾಗುತ್ತೇವೆ’ ಎಂದಾಗ ವಿಪಕ್ಷಗಳ ಕೂಟ ನಗೆಗಡಲಲ್ಲಿ ತೇಲಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ನೀವು ಹೇಳಿದ ಮೇಲೆ ಅದು ಆಗಲಿದೆ. ನಾನು ಮದುವೆಯಾಗುತ್ತೇನೆ’ ಎಂದು ನಗುಮುಖದಿಂದಲೇ ಉತ್ತರಿಸಿದರು. ‘ನೀವು ತನ್ನ ಮಾತು ಕೇಳೋದಿಲ್ಲ ಎಂದು ನಿಮ್ಮ ತಾಯಿಯೇ ಹೇಳಿದ್ದರು. ಖಂಡಿತವಾಗಿ ಮದುವೆ ಆಗಬೇಕು. ನಮ್ಮ ಮಾತನ್ನು ಕೇಳಿ’ ಎನ್ನುವುದು ಲಾಲು ಸಲಹೆಯಾಗಿತ್ತು.

ಕರ್ನಾಟಕದ ಮೇಲ್ಪಂಕ್ತಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಮತಗಳು ವಿಭಜನೆಯಾದಷ್ಟು ಬಿಜೆಪಿಗೆ ಲಾಭ. ಆದರೆ, ರಾಜ್ಯ ಚುನಾವಣೆಯಲ್ಲಿ ಈ ವಿಭಜನೆ ತಡೆಯುವಲ್ಲಿ ಸಫಲಗೊಂಡ ಕಾಂಗ್ರೆಸ್, ಎಸ್​ಡಿಪಿಐ, ಜೆಡಿಎಸ್​ಗೆ ಮುಸ್ಲಿಂ ಮತಗಳು ವಾಲದಂತೆ ಎಚ್ಚರಿಕೆ ವಹಿಸಿತು. ಇದೇ ತಂತ್ರವನ್ನು ಲೋಕಸಭೆ ಚುನಾವಣೆಯಲ್ಲೂ ಅನುಸರಿಸಿ ದರೆ ಬಿಜೆಪಿಗೆ ಪ್ರಬಲ ಸವಾಲೊಡ್ಡಬಹುದು ಎಂಬ ವಿಚಾರ ವಿಪಕ್ಷಗಳ ಮಧ್ಯೆ ಚರ್ಚೆಯಾಗಿದೆ.

ಇಬ್ಬರು ಮಕ್ಕಳ ತಾಯಿಯ ಕುತ್ತಿಗೆಗೆ ಇರಿದು, ತನ್ನ ಕುತ್ತಿಗೆಗೂ ಚುಚ್ಚಿಕೊಂಡ!; ಸಾಯಲೆತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದವನ ಕೃತ್ಯ!

ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?

Share This Article

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…