

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2025-26ಬನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಮಧ್ಯಮವರ್ಗದವರಿಗೆ ಬಂಪರ್ ಘೋಷಣೆಗಳನ್ನು ಮಾಡಿದ್ದಾರೆ. ವಿತ್ತ ಸಚಿವರ ಬಜೆಟ್ ಭಾಷಣದಲ್ಲಿ 12 ಲಕ್ಷ ಆದಾಯದವರೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ.
₹12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ; ₹0–₹4ಲಕ್ಷ ತೆರಿಗೆ ಇಲ್ಲ, ₹4ಲಕ್ಷದಿಂದ ₹8ಲಕ್ಷವರೆಗೆ ಶೇ4, ₹8ಲಕ್ಷದಿಂದ ₹11ಲಕ್ಷ– ಶೇ 10, ₹12ಲಕ್ಷದಿಂದ ರಿಂದ ₹15ಲಕ್ಷ– ಶೇ 15, ₹ 16 ಲಕ್ಷದಿಂದ ₹20 ಲಕ್ಷವರೆಗೆ ಶೇ 20, ₹21ಲಕ್ಷದಿಂದ ₹24ಲಕ್ಷವರೆಗೆ ಶೇ 25ರಷ್ಟು ತೆರಿಗೆ ವಿಧಿಸಲಾಗುತ್ತದೆ.