

Rajnath Singh: ಮೇ 7 ರಂದು ನಡೆಸಿದ ಆಪರೇಷನ್ ಸಿಂಧೂರ ಕಾಯಾರ್ಚರಣೆ ಮೂರು ಸೇನೆಗಳ ಸಮನ್ವಯದ ಬಲಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ (ಸೆ 30) ಶ್ಲಾಘಿಸಿದರು. ದೆಹಲಿಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಸಿಂಗ್, ಸೇನೆಯ ಕಮಾಂಡರ್‌ಗಳ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಪರಿಸ್ಥಿತಿಯ ಬಗ್ಗೆ ಅರಿತುಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಸೇವೆ ಮೂಲಕ ಮೋದಿ ಜನ್ಮದಿನಾಚರಣೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ 26 ಜನರ ಸಾವಿಗೆ ಪ್ರತೀಕಾರವಾಗಿ ನಡೆದ ಸಿಂಧೂರ ಕಾರ್ಯಾಚರಣೆಯ ವೇಳೆ ಸೇನೆಯ ಆಕಾಶೀರ್ ಮತ್ತು ನೌಕಾಪಡೆಯ ಟ್ರಿಗನ್ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಐಎಎಫ್‌ನ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ (ಐಎಸಿಸಿಎಸ್) ನ ಮಹತ್ವವನ್ನು ಇದೇ ವೇಳೆ ಉಲ್ಲೇಖಿಸಿದರು. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯಾಚರಣೆ ಪರಿಣಾಮಕಾರಿಯಾಗಲು ಒಗ್ಗಟ್ಟು ತುಂಬಾ ಅವಶ್ಯಕಯಾಗಿದೆ. ನಮ್ಮ ಪ್ರತಿಯೊಂದು ಸೇವೆಗಳು ಸ್ವತಂತ್ರವಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿದ್ದರೂ, ಭೂಮಿ, ಸಮುದ್ರ, ವಾಯು, ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ನ ಪರಸ್ಪರ ಸಂಬಂಧ ಹೊಂದಿರುವ ಸ್ವಭಾವವು ಸಹಯೋಗದ ಬಲವು ಗೆಲುವನ್ನು ಖಾತರಿ ಮಾಡುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ಮೂರು ಸೇನೆಗಳ ನಡುವೆ ಒಗ್ಗಟ್ಟು ಮತ್ತು ಏಕೀಕರಣವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶ ಹೊಂದಿದ್ದು, ಇದು ಕೇವಲ ನೀತಿಯ ವಿಷಯವಲ್ಲ, ವೇಗವಾಗಿ ಬದಲಾಗುತ್ತಿರುವ ಭದ್ರತಾ ವಾತಾವರಣದಲ್ಲಿ ಬದುಕುಳಿಯುವ ವಿಷಯವಾಗಿದೆ, ಡಿಜಿಟಲ್ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಎತ್ತಿ ತೋರಿಸಿದ ರಕ್ಷಣಾ ಸಚಿವರು, ಸೇನೆಯ ಕಂಪ್ಯೂಟರೈಸ್ಡ್ ಇನ್ವೆಂಟರಿ ಕಂಟ್ರೋಲ್ ಗ್ರೂಪ್ (CICG), ವಾಯುಪಡೆಯ ಇಂಟಿಗ್ರೇಟೆಡ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ ಆನ್‌ಲೈನ್ ಸಿಸ್ಟಮ್ (IMMOLS) ಮತ್ತು ನೌಕಾಪಡೆಯ ಇಂಟಿಗ್ರೇಟೆಡ್ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಗತ್ತು ವೇಗವಾಗಿ ಬದಲಾಗುತ್ತಿದೆ, ಯಾವುದೇ ಸೇವೆಯು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಸಂಘರ್ಷದ ಸಮಯದಲ್ಲಿ ಯಶಸ್ಸಿಗೆ ಪರಸ್ಪರ ಕಾರ್ಯಸಾಧ್ಯತೆ ಮತ್ತು ಒಗ್ಗಟ್ಟು ಅತ್ಯಗತ್ಯ, ವಾಯುಯಾನ ಸುರಕ್ಷತೆ ಮತ್ತು ಸೈಬರ್ ಯುದ್ಧದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ, ಮಾನದಂಡಗಳಲ್ಲಿನ ವ್ಯತ್ಯಾಸವು ಹಾನಿಕಾರಕವೆಂದು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಒಗ್ಗಟ್ಟಿನತ್ತ ಸಾಗುತ್ತಿರುವಾಗ ಸವಾಲುಗಳು ಸಹಜ, ಆದರೆ ಸಂವಾದ, ತಿಳುವಳಿಕೆ ಮತ್ತು ಸಂಪ್ರದಾಯಗಳಿಗೆ ಗೌರವ ನೀಡುವ ಮೂಲಕ, ನಾವು ಈ ಅಡೆತಡೆಗಳನ್ನು ನಿವಾರಿಸಬಹುದು. ಪ್ರತಿಯೊಂದು ಸೇವೆಯು ಇತರರು ತಮ್ಮ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಬೇಕು ಮತ್ತು ಎಲ್ಲರೂ ಒಟ್ಟಾಗಿ ಸಂಪ್ರದಾಯವನ್ನು ಗೌರವಿಸಬೇಕು ಎಂದು ತಿಳಿಸಿದರು.(ಏಜೆನ್ಸೀಸ್)