ಶಿರ್ವ: ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾಗಿ ಸೂಡ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷರಾಗಿ ಉಮೇಶ್ ಪ್ರಭು ಪಾಲಮೆ, ಉಪಾಧ್ಯಕ್ಷರಾಗಿ ಎಳ್ಳಾರೆ ಪಾಂಡುರಂಗ ಕಾಮತ್ ಅವಿರೋಧ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಸದಸ್ಯರಾಗಿ ಶಶಿಧರ ವಾಗ್ಲೆ, ಸಂತೋಷ್ ವಾಗ್ಲೆ, ಸುರೇಂದ್ರ ನಾಯಕ್, ಶಿವರಾಮ ನಾಯಕ್, ಉಮೇಶ ನಾಯಕ್, ಸತ್ಯನಾರಾಯಣ ನಾಯಕ್, ಗಣಪತಿ, ವಿಠಲ್, ಉದಯ ಪ್ರಭು, ರಾಮದಾಸ್ ಪ್ರಭು, ದೇವದಾಸ್ ಪಾಟ್ಕರ್, ರಾಮಣ್ಣ ಪ್ರಭು ಆಯ್ಕೆಯಾಗಿದ್ದಾರೆ.
ನಿವೃತ್ತ ಮುಖ್ಯಶಿಕ್ಷಕ ಸೂಡ ದೇವೇಂದ್ರ ಬೋರ್ಕಾರ್ ಶಿರ್ವ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಪಾಟ್ಕರ್, ಬಿ.ಪುಂಡಲೀಕ ಮರಾಠೆ, ರಂಜಿತ್ ಭಟ್, ಹರೀಶ್ ಪಾಟ್ಕರ್, ಚಂದ್ರಕಾಂತ್ ನಾಯಕ್, ಶ್ರೀಕಾಂತ್ ಕಾಮತ್, ರಮಾನಾಥ್ ನಾಯಕ್, ಗಣಪತಿ ನಾಯಕ್, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್, ಕ್ಷೇತ್ರದ ಸದಸ್ಯರು ಉಪಸ್ಥಿತರಿದ್ದರು. ಉಮೇಶ ಪ್ರಭು, ಪಾಂಡುರಂಗ ಕಾಮತ್, ಜಯರಾಮ ಪ್ರಭು, ಸತ್ಯನಾರಾಯಣ ನಾಯಕ್, ವಿಠಲ ಮಡ್ಕೇಕಾರ್ ವರದಿ ಮಂಡಿಸಿದರು. ಶಶಿಧರ ವಾಗ್ಲೆ ಸ್ವಾಗತಿಸಿದರು. ಸಂತೋಷ್ ನಾಯಕ್ ಪಳ್ಳಿ ವಂದಿಸಿದರು. ಉಮೇಶ್ ನಾಯಕ್ ಪೆರ್ನಂಕಿಲ ನಿರೂಪಿಸಿದರು.