ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆ

chirag
ಚಿರಾಗ್ ಸಿ.ಪೂಜಾರಿ
Published on

ಕಾರ್ಕಳ: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ.ಪೂಜಾರಿ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ 2024ರಲ್ಲಿ 18ರ ಒಳಗಿನ ವಯೋಮಾನದ ಬಾಲಕರ ವಿಭಾಗದ 200 ಮೀ. ಓಟದಲ್ಲಿ ಪದಕ ವಿಜೇತರಾಗಿದ್ದಾರೆ. ಆ ಮೂಲಕ ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ್ ವಿಶ್ವವಿದ್ಯಾಲಯದಲ್ಲಿ ಅ.16ರಿಂದ 19ರವರೆಗೆ ನಡೆಯುವ 35ನೇ ಸೌತ್ ಜೋನ್(ದಕ್ಷಿಣ ಭಾರತ ಮಟ್ಟ) ಜೂನಿಯರ್ ಅಥ್ಲ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 200 ಮೀ. ಓಟ, ಮೆಡ್ಲೆ ರಿಲೇಗೆ ಆಯ್ಕೆಯಾಗಿದ್ದಾರೆ. ಇವರು ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ- ಜಯಲಕ್ಷ್ಮೀ ದಂಪತಿ ಸುಪುತ್ರ. ಸಾಧಕ ವಿದ್ಯಾರ್ಥಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಕಾಲೇಜು ಪ್ರಾಂಶುಪಾಲ, ಬೋಧಕ-ಬೋಧಕೇತರ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net