ಆ.15ರಂದು ಪುಟಿನ್​-ಟ್ರಂಪ್​ ಭೇಟಿ! ಇಬ್ಬರು ನಾಯಕರಿಗೂ ಝೆಲೆನ್ಸ್ಕಿ ಕಿವಿಮಾತು | America-Russia

ವಿಜಯವಾಣಿ (49)
Published on

America-Russia: ಯುಕ್ರೇನ್​ ಮೇಲಿನ ಯುದ್ಧವನ್ನು ಕೈಬಿಡುವಂತೆ ರಷ್ಯಾಗೆ ಗಡುವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಈ ಎಲ್ಲ ಬೆಳವಣಿಗೆಯ ನಡುವೆಯೇ ರಷ್ಯಾದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆ.15ರಂದು ಎರಡು ಬಲಿಷ್ಠ ರಾಷ್ಟ್ರಗಳ ನಾಯಕರು, ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾ ರಾಜ್ಯದಲ್ಲಿ ಮಾತುಕತೆ ನಡೆಸಲಿದ್ದಾರೆ. ಇದು ಯುಕ್ರೇನಿಯನ್​​ ಅಧ್ಯಕ್ಷ ಝೆಲೆನ್ಸ್ಕಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಅಮೆರಿಕ-ರಷ್ಯಾ ದೇಶಗಳ ನಡುವಿನ ಸಭೆಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಪರಿಗಣಿಸದೆ, ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅಥವಾ ಒಪ್ಪಂದವನ್ನು ನಾವು ಸ್ವೀಕರಿಸುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾ ಆಕ್ರಮಿಸಿಕೊಂಡಿರುವ ತಮ್ಮ ಪ್ರದೇಶಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಒಂದು ಹಂತದಲ್ಲಿ ಅವರು ಉಕ್ರೇನ್‌ನಲ್ಲಿ ಭೇಟಿಯಾಗಬೇಕು ಎಂದಿದ್ದಾರೆ.

ಅಮೆರಿಕ ಸರ್ಕಾರ ಅಧಿಕೃತವಾಗಿ ಅವರನ್ನು ರಷ್ಯಾದ ಅವಿಭಾಜ್ಯ ಅಂಗವೆಂದು ಗುರುತಿಸಿದರೆ, ಸಂಘರ್ಷ ಇನ್ನಷ್ಟು ತೀವ್ರಗೊಳ್ಳುತ್ತದೆಯೇ ಹೊರತು ಕೊನೆಗೊಳ್ಳುವುದಿಲ್ಲ. ಯುಕ್ರೇನ್‌ನ ಪ್ರಾದೇಶಿಕ ಸಮಗ್ರತೆಯ ಮೇಲೆ ರಾಜಿ ಮಾಡಿಕೊಳ್ಳುವ ಮಾತಿಲ್ಲ. ಟ್ರಂಪ್-ಪುಟಿನ್ ಮಾತುಕತೆಯಲ್ಲಿ ಶಾಂತಿಯ ಉದ್ದೇಶಕ್ಕೆ ಸೀಮಿತವಾಗಿದ್ದರೆ ಅದು ಉತ್ತಮ. ಆಕ್ರಮಣಕಾರರಿಗೆ ತಮ್ಮ ಭೂಮಿಯನ್ನು ಹಸ್ತಾಂತರಿಸಲು ನಾವು ಸಿದ್ಧರಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.

ಇದರ ಹೊರತಾಗಿ, ಶನಿವಾರ (ಆ.09) ರಷ್ಯಾದ ಸೇನೆಯು ಯುಕ್ರೇನ್‌ನ ಖೇರ್ಸನ್ ನಗರದ ಮೇಲೆ ಡ್ರೋನ್ ದಾಳಿ ನಡೆಸಿತು. ಘಟನೆಯಲ್ಲಿ ಇಬ್ಬರು ಯುಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಪೋರಿಝಿಯಾದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇನ್ನಿಬ್ಬರು ಮೃತಪಟ್ಟಿದ್ದಾರೆ. ರಷ್ಯಾದ ಸೇನೆಯು 47 ಡ್ರೋನ್‌ಗಳನ್ನು ಹಾರಿಸಿದೆ. ಈ ದಾಳಿಯಲ್ಲಿ 16 ಬಲಿಯಾಗಿವೆ ಎಂದು ಯುಕ್ರೇನಿಯನ್ ವಾಯುಪಡೆ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net