

Constipation: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಇಂದಿನ ಜೀವನಶೈಲಿಗೆ ಒಗ್ಗಿಕೊಂಡಿರುವ ಬಹುತೇಕರಿಗೆ ಈ ಸಮಸ್ಯೆ ತೀರ ಸಾಮಾನ್ಯವಾಗಿಬಿಟ್ಟಿದೆ. ಮಲಬದ್ಧತೆಗೆ ಹಲವು ಕಾರಣಗಳಿವೆ. ಆಹಾರ ಪದ್ಧತಿ, ಒತ್ತಡ ಮತ್ತು ಕಡಿಮೆ ದೈಹಿಕ ಚಟುವಟಿಕೆಯಿಂದ ಮಲಬದ್ಧತೆ ಹೆಚ್ಚುತ್ತದೆ. ಮಂದಗತಿಯ ಕರುಳಿನ ಚಲನೆಯಿಂದಾಗಿ ಗಟ್ಟಿಯಾದ ಮಲ, ಶೌಚಾಲಯಕ್ಕೆ ಹೋಗುವುದನ್ನೇ ತಪ್ಪಿಸುವಂತ ಭಾವನೆಯನ್ನು ಆಗಾಗ್ಗೆ ಕೊಡುತ್ತದೆ.
ಈ ಸಮಸ್ಯೆಗೆ ವೈದ್ಯಕೀಯ ಔಷಧಿಗಳಿದ್ದರೂ, ಮನೆಯಲ್ಲೇ ಸಿಗುವ ಒಂದಷ್ಟು ಪದಾರ್ಥಗಳಿಂದಲೇ ನೈಸರ್ಗಿಕವಾಗಿ ಗುಣಪಡಿಸಿಕೊಳ್ಳಬಹುದು. ಇದು ಹೆಚ್ಚು ಪರಿಣಾಮಕಾರಿಯೂ ಹೌದು. ಹೀಗಾಗಿ ಇಂತಹ ಸರಳ ಹಾಗೂ ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ಮುಂದಾಗುವ ದೊಡ್ಡ ಅಪಾಯವನ್ನು ತಪ್ಪಿಸಬಹುದು.
1. ಫೈಬರ್ ಭರಿತ ಆಹಾರಗಳು: ನಾರಿನಾಂಶ ಮಲವನ್ನು ಮೃದುಗೊಳಿಸುವ ಮತ್ತು ಕರುಳಿನ ಮೂಲಕ ಮಲ ಸಾಗುವಿಕೆಯನ್ನು ವೇಗಗೊಳಿಸುವ ನೈಸರ್ಗಿಕ ವಸ್ತುವಾಗಿದೆ. ಹೆಚ್ಚಿನ ಫೈಬರ್ ಆಹಾರಗಳ ಸೇವನೆ ಮಲಬದ್ಧತೆಯನ್ನು ನಿಯಂತ್ರಿಸಲು ಸಹಕಾರಿ. ಉದಾಹರಣೆಗೆ ಸೇಬು, ಪಪ್ಪಾಯ, ಪೇರಳೆ/ಸೀಬೆ, ಓಟ್ಸ್, ಬೀನ್ಸ್, ಪಾಲಕ್ ಮತ್ತು ಮೂಲಂಗಿ.
2. ನೀರು: ನೀರಿನ ಕೊರತೆಯು ಮಲಬದ್ಧತೆಗೆ ಮುಖ್ಯ ಕಾರಣ. ಮಲ ಗಟ್ಟಿಯಾಗುವುದನ್ನು ತಡೆಯಲು ನೀರು ಅಗತ್ಯ. ನೀವು ಹೆಚ್ಚಿನ ಫೈಬರ್ ಸೇವಿಸಿದರೆ, ನಿಮಗೆ ಹೆಚ್ಚಿನ ನೀರು ಬೇಕಿದೆ. ಆದ್ದರಿಂದ, ದಿನಕ್ಕೆ ಕನಿಷ್ಠ 8ರಿಂದ 10 ಗ್ಲಾಸ್ ನೀರು ಕುಡಿಯುವುದು ಒಳಿತು.
3. ನಿಂಬೆ ರಸ, ಜೇನುತುಪ್ಪ ಮತ್ತು ಬೆಳಗ್ಗೆ ಬೆಚ್ಚಗಿನ ನೀರು: ಈ ಮಿಶ್ರಣವು ಜೀರ್ಣಾಂಗ ವ್ಯವಸ್ಥೆಯನ್ನು ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ನಿಮಗೆ ಉತ್ತಮ ಫಲಿತಾಂಶವನ್ನೇ ನೀಡುತ್ತದೆ.
ಇದನ್ನೂ ಓದಿ: 354 ಬೋಗಿ, 4.5 ಕಿ.ಮೀ ಉದ್ದ, 7 ಶಕ್ತಿಶಾಲಿ ಇಂಜಿನ್! ಭಾರತದ ಬ್ರಹ್ಮಾಸ್ತ್ರ ಈ ‘ರುದ್ರಾಸ್ತ್ರ’ ಸರಕು ರೈಲು | Rudrastra4. ದೈಹಿಕ ವ್ಯಾಯಾಮ: ಚಲನೆಯ ಕೊರತೆಯು ಮಲಬದ್ಧತೆಗೆ ಕಾರಣವಾಗಬಹುದು. ನಿಮ್ಮ ದೈನಂದಿನ ಜೀವನದಲ್ಲಿ ಒಂದಷ್ಟು ವ್ಯಾಯಾಮಗಳನ್ನು ಸೇರಿಸುವುದರಿಂದ ಕರುಳಿನ ಚಲನೆಯನ್ನು ಸುಧಾರಿಸಬಹುದು. ಪ್ರತಿದಿನ ಕನಿಷ್ಠ 20ರಿಂದ 30 ನಿಮಿಷಗಳ ಕಾಲ ನಡೆಯುವುದು, ಯೋಗಾಸನಗಳು, ಭುಜಂಗಾಸನ, ವಜ್ರಾಸನ ಇತ್ಯಾದಿ, ಬಸ್ಕಿ ಮತ್ತು ಲಘು ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
5. ತ್ರಿಫಲ ಚೂರ್ಣ/ ಪುಡಿ: ತ್ರಿಫಲವು ಆಯುರ್ವೇದದಲ್ಲಿ ಜನಪ್ರಿಯ ಔಷಧಿ. ಇದು ನೈಸರ್ಗಿಕವಾಗಿ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ. ಇದರಲ್ಲಿರುವ ಮೂರು ಹಣ್ಣುಗಳಾದ ಹರಿತಕಿ, ಬಿಭಿತಕಿ ಮತ್ತು ಅಮಲಕಿ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಮಲಗುವ ಮುನ್ನ ಒಂದು ಚಮಚ ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಿರಿ. ಇದು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.