ರಷ್ಯಾದ ಪ್ಸ್ಕೋವ್ ನಗರದ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ, 4 ವಿಮಾನಗಳಿಗೆ ಹಾನಿ

russ+
Published on

ರಷ್ಯಾ: ಪಶ್ಚಿಮ ರಷ್ಯಾದ ಪ್ಸ್ಕೋವ್ ನಗರದ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದಿದ್ದು, 4 ವಿಮಾನಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಡ್ರೋನ್ ದಾಳಿಯ ಪರಿಣಾಮವಾಗಿ, ನಾಲ್ಕು Il-76 ವಿಮಾನಗಳು ಹಾನಿಗೊಳಗಾದವು. ಬೆಂಕಿ ಕಾಣಿಸಿಕೊಂಡಿತು ಮತ್ತು ಎರಡು ವಿಮಾನಗಳು ಬೆಂಕಿಯಿಂದಾಗಿ ಸಿಡಿದಿದೆ.


ಪೆಸ್ಕೋವ್ ಉಕ್ರೇನ್ ಗಡಿಯಿಂದ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ, ದರ ಸುತ್ತಮುತ್ತಲಿನ ಪ್ರದೇಶವು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಲಾಟ್ವಿಯಾ ಮತ್ತು ಎಸ್ಟೋನಿಯಾದ ಗಡಿಯಾಗಿದೆ.


ಮಾಸ್ಕೋದ ವ್ನುಕೊವೊ ವಿಮಾನ ನಿಲ್ದಾಣದ ಮೇಲಿನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು TASS ವರದಿ ಮಾಡಿದೆ. ಮೇ ತಿಂಗಳಲ್ಲಿ ಪೆಸ್ಕೋವ್ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿತ್ತು.ಕೆಲವು ತಿಂಗಳುಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಡ್ರೋನ್ ದಾಳಿಗಳು ಹೆಚ್ಚಿವೆ.


ಎರಡೂ ದೇಶಗಳು ಪದೇ ಪದೇ ಡ್ರೋನ್ ದಾಳಿ ನಡೆಸಿವೆ. ಮೇ ತಿಂಗಳಲ್ಲಿ, ಉಕ್ರೇನ್ ಕಪ್ಪು ಸಮುದ್ರದ ಬಳಿ ಕ್ರೈಮಿಯಾದಲ್ಲಿ ರಷ್ಯಾದ ಅತಿದೊಡ್ಡ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡಿತು.


ಇದೀಗ ಮತ್ತೆ ಉಕ್ರೇನ್ರ್​​ ರಷ್ಯಾದ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದು, ಈ ಹಿಂದೆ ಮೇ 3 ರಂದು, ಉಕ್ರೇನ್ ಪುಟಿನ್ ಅವರ ಸರ್ಕಾರಿ ಕಚೇರಿಯ ಮೇಲೆ ಡ್ರೋನ್ ದಾಳಿ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net