ರಷ್ಯಾದ ಪ್ರಮುಖ ರಫ್ತು-ಆಧಾರಿತ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್‌ ದಾಳಿ ಮಾಡಿದ ಯುಕ್ರೇನ್​| Ukraine

Ukraine Drones Strike
Published on

Ukraine: ರಷ್ಯಾದ ಲೆನಿನ್‌ಗ್ರಾಡ್ ಪ್ರದೇಶದ ಕಿನೆಫ್​​ನಲ್ಲಿರುವ ಇಂಧನ ಮತ್ತು ಕೈಗಾರಿಕಾ ಸೌಲಭ್ಯಗಳ ಕಿರಿಶಿ ತೈಲ ಸಂಸ್ಕರಣಾಗಾರದ ಮೇಲೆ ರಾತ್ರೋರಾತ್ರಿ ಯುಕ್ರೇನ್​ ಡ್ರೋನ್‌ ದಾಳಿ ನಡೆಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಗವರ್ನರ್ ಅಲೆಕ್ಸಾಂಡರ್ ಡ್ರೊಜ್ಡೆಂಕೊ, ಡ್ರೋನ್ ಅವಶೇಷಗಳಿಂದ ಉಂಟಾದ ಬೆಂಕಿಯನ್ನು ನಂದಿಸಲಾಗಿದೆ. ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಸುರ್ಗುಟ್ನೆಫ್ಟೆಗಾಸ್ ಒಡೆತನದ ಕೈನೆಫ್, ರಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಿದ್ದು. ಇದರ ವಾರ್ಷಿಕವಾಗಿ 20 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಇದು ಲೆನಿನ್‌ಗ್ರಾಡ್ ಪ್ರದೇಶದ ಕಿರಿಶಿ ಜಿಲ್ಲೆಯಲ್ಲಿದ್ದು, ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಆಗ್ನೇಯಕ್ಕೆ ಸುಮಾರು 100 ಕಿಲೋಮೀಟರ್ ಮತ್ತು ಯುಕ್ರೇನ್ ಗಡಿಯಿಂದ 800 ಕಿಲೋಮೀಟರ್‌ ಉತ್ತರದಲ್ಲಿದೆ.

ಈ ದಾಳಿಯ ಬಗ್ಗೆ ಮಾಹಿತಿ ನೀಡಿರುವ ಮಾತೋಬ್ಬ ರಷ್ಯಾದ ಪೆರ್ಮ್ ಪ್ರದೇಶದ ಗವರ್ನರ್ ಡಿಮಿಟ್ರಿ ಮಖೋನಿನ್, ಗುಬಾಖಾ ನಗರದಲ್ಲಿ ಯುಕ್ರೇನ್​ ಡ್ರೋನ್ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ಸೈಟ್ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾ ದಾಳಿಯ ಬಗ್ಗೆ ಭಾನುವಾರ ಮಾತನಾಡಿರುವ ಯುಕ್ರೇನಿಯನ್ ಶಾಸಕ ಒಲೆಕ್ಸಿ ಹೊಂಚರೆಂಕೊ, ರಷ್ಯಾದ ಅತಿದೊಡ್ಡ ಮೆಥನಾಲ್ ಉತ್ಪಾದಕರಲ್ಲಿ ಒಂದಾದ ಗುಬಾಖಾದಲ್ಲಿರುವ ಮೆಟಾಫ್ರಾಕ್ಸ್ ಕೆಮಿಕಲ್ಸ್ ಸ್ಥಾವರದ ಹೊಸ ಸೌಲಭ್ಯವನ್ನು ಡ್ರೋನ್‌ಗಳು ಹೊಡೆದು ಹಾನಿಗೊಳಿಸಿವೆ ಎಂದು ಹೇಳಿದ್ದಾರೆ. ಈ ಹಕ್ಕನ್ನು ಸ್ವತಂತ್ರವಾಗಿ ಪರಿಶೀಲಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರಷ್ಯಾದ ಗುಬಾಖಾ ಯುರಲ್ಸ್ ಪರ್ವತಗಳಲ್ಲಿರುವ ಪೆರ್ಮ್ ಪ್ರದೇಶದಲ್ಲಿದೆ, ಕೈವ್‌ನಿಂದ ಸುಮಾರು 2,000 ಕಿಮೀ ದೂರದಲ್ಲಿದೆ. ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 1,700 ಕಿಮೀ ದೂರದಲ್ಲಿದ್ದು. ಯುಕ್ರೇನ್ ಇಂಧನ ಸ್ವತ್ತುಗಳು ಮತ್ತು ಇತರ ಗುರಿಗಳ ಮೇಲೆ ತನ್ನ ಡ್ರೋನ್ ದಾಳಿಯ ವ್ಯಾಪ್ತಿಯನ್ನು ರಷ್ಯಾದೊಳಗೆ ಆಳವಾಗಿ ವಿಸ್ತರಿಸುತ್ತಲೇ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net