ಕನ್ನ ಹಾಕಲು ಬಂದ ಕಳ್ಳ ಮನೆಯಲ್ಲಿ ಮಾಡಿದೆಂಥಾ ಕೆಲಸ; ಗೊತ್ತಾದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ.. | Robber

Untitled-design-2024-10-06T171554.457-1
Published on

ಲಂಡನ್​: ಮನೆಗೆ ಕಳ್ಳ(Robber) ಬಂದಿದ್ದ ಎಂದರೆ ಸಾಕು ಬೆಲೆಬಾಳುವ ವಸ್ತುಗಳ ಜತೆಗೆ ಇತರೆ ಕೆಲವು ಪದಾರ್ಥಗಳು ನಾಪತ್ತೆ ಎಂದೆ ಅರ್ಥ. ಅಷ್ಟರ ಮಟ್ಟಿಗೆ ಕಳ್ಳರು ಮನೆದೋಚುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಕಳ್ಳತನದ ಬದಲು ಮನೆಕೆಲಸ ಮಾಡಿ ಮಾಲೀಕಳಿಗೆ ಪತ್ರ ಬರೆದಿಟ್ಟು ಬಂದಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ.

ಈತ ಈ ಹಿಂದೆ ಹಲವು ಅಪರಾಧಗಳನ್ನು ಮಾಡಿ ಜೈಲಿಗೆ ಹೋಗಿರುವ ಕಳ್ಳ. ಇತ್ತೀಚೆಗೆ ಮನಮೌತ್‌ಶೈರ್‌ನ ಮನೆಯೊಂದಕ್ಕೆ ಕಳ್ಳತನ ಮಾಡಲು ಹೋಗಿದ್ದಾನೆ. ಆ ಮನೆಯಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ವಾಸ ಮಾಡುತ್ತಿರುವುದನ್ನು ತಿಳಿದು ಬಟ್ಟೆ ಒಗೆಯುವುದು ಸೇರಿದಂತೆ ಮನೆಗೆಲಸವನ್ನೆಲ್ಲ ಮಾಡಿದ್ದಾನೆ. ಫ್ರಿಡ್ಜ್​​ ಎಲ್ಲ ರೆಡಿ ಮಾಡಿ ಮನೆಯನ್ನು ಸ್ವಚ್ಛಗೊಳಿಸಿದ್ದಾನೆ. ಅಷ್ಟೇ ಅಲ್ಲ ಕೆಲಸ ಮುಗಿಸಿ ಬರುವ ಮಹಿಳೆ ಸುಸ್ತಾಗಿರುತ್ತಾರೆ ಎಂದು ತಿಳಿದು ಅಡುಗೆ ಮಾಡಿ ಟೇಬಲ್​​ ಮೇಲೆ ಸಿದ್ಧಪಡಿಸಿದ ಊಟವನ್ನಿಟ್ಟಿದ್ದಾನೆ. ರೆಡ್​ ವೈನ್​​ ಕುಡಿದು ಬಾಟಲಿ, ಗ್ಲಾಸ್​​​ ಇಡುವುದರ ಜತೆಗೆ ಪತ್ರವನ್ನು ಬರೆದಿದ್ದಾನೆ.

ಮನೆಗೆ ಪ್ರವೇಶಿಸಿದ ಮಾಲೀಕರು ಪತ್ರವನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದಾದ ನಂತರ ಮನೆಯಲ್ಲಿ ಇರಲು ಭಯವಾಗಿ ತನ್ನ ಮನೆಗೆ ಹೋಗದೆ ಸ್ನೇಹಿತರ ಮನೆಗೆ ಹೋಗಿ ತಂಗಿದ್ದಾರೆ.

ಪತ್ರದಲ್ಲಿ ಚಿಂತೆ ಮಾಡಬೇಡಿ, ಸಂತೋಷವಾಗಿ ಆಹಾರ ಸೇವಿಸಿ ಎಂದು ಮೆಸೇಜ್​ ಬರೆದಿದ್ದಾನೆ. 36 ವರ್ಷದ ಈ ಕಳ್ಳನ ಹೆಸರು ಡಾಮಿಯನ್ ವೊಜ್ನಿಲೋವಿಕ್. ಈತನ ಮನೆ ಕಳ್ಳತನ ಇದೀಗ ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗುತ್ತಿದೆ. ಇದೀಗ ಅವರಿಗೆ 22 ತಿಂಗಳ ಶಿಕ್ಷೆ ವಿಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಕಳ್ಳನಿಗೆ ಶಿಕ್ಷೆಯಾಗಿದೆ ಎಂದು ತಿಳಿದ ಬಳಿಕ ಮಹಿಳೆ ನಿರಾಳವಾಗಿ ತನ್ನ ಮನೆಗೆ ಮರಳಿದ್ದಾಳೆ. ತನಗೆ ಹಿಂದೆಂದೂ ಇಷ್ಟೊಂದು ಟೆನ್ಷನ್ ಇರಲಿಲ್ಲ ಎಂದು ಹೇಳಿದ್ದಾರೆ. ನಾನು ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ ಎಂದು ತಿಳಿದು ಅವನು ನನ್ನ ಮನೆಗೆ ಕಳ್ಳತನ ಮಾಡಲು ಬಂದಿದ್ದಾನೆ ಎಂಬ ಕಾರಣಕ್ಕಾಗಿಯೆ ನಾನು ಮನೆ ಬಿಟ್ಟು ಹೋಗಿದ್ದೆ. ಹಾಗೂ ನನ್ನ ಸ್ನೇಹಿತರ ಮನೆಯಲ್ಲಿ ವಾಸವಿದ್ದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net