ಯುರೇನಿಯಂ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ; ಹೆಚ್ಚಿನ ಹುದ್ದೆಗಳು ಐಟಿಐ ಕಲಿತವರಿಗೆ ಮೀಸಲು

UCIL
Published on

ಬೆಂಗಳೂರು: ಅಣುಶಕ್ತಿ ಇಲಾಖೆಯ ಅಧೀನದಲ್ಲಿರುವ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ನಲ್ಲಿ ಪ್ರಸ್ತುತ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ಶೀಘ್ರವೇ ನೇಮಕಾತಿ ನಡೆಯಲಿದೆ. ಮೆರಿಟ್ ಸಹಿತ ವಿವಿಧ ಮಾನದಂಡದಂತೆ ನೇಮಕಾತಿ ನಡೆಯಲಿದ್ದು, ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಯುಸಿಐಎಲ್ ಹಿನ್ನೆಲೆ

ಕೇಂದ್ರ ಅಣುಶಕ್ತಿ ಇಲಾಖೆಯ ಅಧೀನದಲ್ಲಿ ಯುರೇನಿಯಂ ಕಾರ್ಪೊರೇಷನ್ ಆ್ ಇಂಡಿಯಾ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಅತಿ ಹೆಚ್ಚು ಅಣುಶಕ್ತಿ ಉತ್ಪಾದಿಸುವ ಸಂಸ್ಥೆಯಾಗಿದ್ದು, 1967ನೇ ಇಸವಿಯ ಅಕ್ಟೋಬರ್ 4ರಂದು ಸ್ಥಾಪಿಸಲಾಗಿದೆ. ಯುಸಿಐಎಲ್‌ನ ಶಾಖೆಗಳು ಬೆಂಗಳೂರು ಸಹಿತ ವಿವಿಧ ರಾಜ್ಯಗಳಲ್ಲಿ ಇದೆ.

ವಿಭಾಗವಾರು ಹುದ್ದೆಗಳು

ಫಿಟ್ಟರ್ 82

ಎಲೆಕ್ಟ್ರೆಷಿಯನ್ 82

ವೆಲ್ಡರ್ (ಗ್ಯಾಸ್, ಎಲೆಕ್ಟ್ರಿಕ್) 40

ಟರ್ನರ್/ಮೆಷಿನಿಸ್ಟ್ 12

ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ 5

ಬಡಗಿ 5

ಪ್ಲಂಬರ್ 5

ಇತರ 12

ಅರ್ಜಿ ಸಲ್ಲಿಕೆ

*ಯುರೇನಿಯಂ ಕಾರ್ಪೊರೇಷನ್‌ಗೆ ಸಂಬಂಧಿಸಿದ ವೆಬ್‌ಸೈಟ್ https://www.apprenticeshipindia.gov.in/candidate-loginಗೆ ಲಾಗಿನ್ ಮಾಡಬೇಕು

*ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅರ್ಜಿ ದೊರೆಯಲಿದ್ದು, ಸೂಕ್ತ ಮಾಹಿತಿಗಳ ಮೂಲಕ ಭರ್ತಿ ಮಾಡಿ ಇದೇ ವೆಬ್‌ಸೈಟ್‌ನಲ್ಲಿ ಕಳುಹಿಸಬೇಕು.

ಅರ್ಹತೆಗಳು ಏನೇನು?

ವಿದ್ಯಾರ್ಹತೆ: ಅಭ್ಯರ್ಥಿಯು ಐಟಿಐ ತೇರ್ಗಡೆಯಾಗಿರಬೇಕಿದ್ದು, ಎನ್‌ಸಿವಿಟಿ (ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್) ಪ್ರಮಾಣಪತ್ರ ಹೊಂದಿರಬೇಕು.

ವಯೋ ಅರ್ಹತೆ: ಎಲ್ಲ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕಿದ್ದು, ಗರಿಷ್ಠ 25 ವರ್ಷದ ಒಳಗಿನವರಾಗಿರಬೇಕು. ವರ್ಗವಾರು ವಯೋ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವೇತನ ಶ್ರೇಣಿ

ಅಪ್ರೆಂಟಿಸ್ ನಿಯಮ 11ರ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ಸ್ಟೈಪೆಂಡ್ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿ ಆಯ್ಕೆ

ಐಟಿಐನಲ್ಲಿ ಪಡೆದ ಒಟ್ಟು ಅಂಕಗಳ ಆಧಾರಿಸಿ ಅಂದರೆ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ವಿಶೇಷ ಸೂಚನೆಗಳು 

*ಭಾರತದಾದ್ಯಂತ ಇರುವ ಯಾವುದೇ ಶಾಖೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಸಿದ್ಧರಿರಬೇಕು.

*ಪರೀಕ್ಷಾ ಲಿತಾಂಶವನ್ನು www.uraniumcorp.in ನಲ್ಲಿ ಪ್ರಕಟಿಸಲಾಗುತ್ತದೆ.

ಒಟ್ಟು ಹುದ್ದೆಗಳು 243

ಅರ್ಜಿ ಸಲ್ಲಿಸಲು ಅಂತಿಮ ದಿನ: 12.11.2023

ಹೆಚ್ಚಿನ ಮಾಹಿತಿ ತಿಳಿಯಲು https://www.apprenticeshipindia.gov.in/ ಲಾಗಿನ್ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net