

ಬಾಲಸೋರ್: ಮೀನುಗಾರಿಕೆಗೆ ಬಂಗಾಳ ಕೊಲ್ಲಿ ಬಾಗದ ಸಮುದ್ರಕ್ಕೆ ತೆರಳಿದ ಒಡಿಶಾದ ಬಾಲಸೋರ್ ಜಿಲ್ಲೆಯ ಮೀನುಗಾರರಿಗೆ ಭಾರಿ ಅಚ್ಚರಿಯೊಂದು ಕಾದಿತ್ತು. ಮೀನು ಹಿಡಿಯುವುದಕ್ಕಾಗಿ ಅವರು ಬೀಸಿದ ಬಲೆಯಲ್ಲಿ ಭಾರಿ ಅಚ್ಚರಿಯೊಂದು ಕಾದಿತ್ತು. ಅವರು ಸೋಮವಾರ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕಾಗಿ ತೆರಳಿದ್ದಾಗ ಈ ಅಚ್ಚರಿ ಎದುರಾಗಿದೆ.
ಬಲೆಗೆ ಏನೋ ಬಿದ್ದಂತಾದ ಅನುಭವವಾದ ಕಾರಣ ಕೂಡಲೇ ಬಲೆಯನ್ನು ಮೇಲೆಳೆಯಲು ಆರಂಭಿಸಿದರು. ಆಗ ಆರಂಭದಲ್ಲಿ ಕಾಣಿಸಿದ್ದು ಕೆಂಪು ಬಣ್ಣ ಕಾಣಿಸಿತು. ನಂತರ ಹಳದಿ ಮೂತಿ ಕಾಣಿಸಿತು. ತೂಕ 50 ಕಿಲೋ ಇರಬಹುದು ಎಂದು ಮೇಲೆತ್ತಿದ್ದವರಿಗೆ ನಿಜಕ್ಕೂ ಶಾಕ್ ! ಅದು ಬಾಂಬ್ ಇರಬಹುದೆಂದು ಆತಂಕಕ್ಕೆ ಈಡಾದ ಅವರು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದರು.
ಇದನ್ನೂ ಓದಿ: ತಪ್ಪಿದ ಟ್ರಂಪ್ ವಿಮಾನ ಅಪಘಾತ