ಅನಿರೀಕ್ಷಿತ ಹಜ್ ಯಾತ್ರೆ ದೇವ ನಿರ್ಣಯ : ಉಳ್ಳಾಲ ದರ್ಗಾದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅನಿಸಿಕೆ

New Project (15)
Published on

ಉಳ್ಳಾಲ: ನಾನು ಹಜ್ ಯಾತ್ರೆ ಮಾಡುವ ಬಗ್ಗೆ ಪೂರ್ವ ನಿರ್ಧಾರ ಮಾಡಿರಲಿಲ್ಲ. ಆದರೆ ಅನಿರೀಕ್ಷಿತ ರೀತಿಯಲ್ಲಿ ಹಜ್ ನಿರ್ವಹಿಸಬೇಕಿದ್ದರೆ ದೇವ ನಿರ್ಣಯ. ರಾಜನ ಕಿರೀಟ ತಾಳ್ಮೆಯಾಗಿದ್ದು ಎಲ್ಲರೂ ಇದನ್ನು ಅನುಸರಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಹಜ್ ಯಾತ್ರೆಯಿಂದ ಊರಿಗೆ ಬಂದ ಬಳಿಕ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಮಾತನಾಡಿದರು.

ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಮಾತನಾಡಿ, ಹಜ್ ಯಾತ್ರೆ ಪರಿಪೂರ್ಣವಾಗಿದ್ದರೆ ಎಲ್ಲ ಪಾಪಗಳು ಮನ್ನಿಸಲ್ಪಟ್ಟು ಆಗತಾನೇ ಹುಟ್ಟಿದ ಮಗುವಿನಂತೆ ಆಗಿರುತ್ತಾನೆ. ಎಲ್ಲರನ್ನೂ ಪ್ರೀತಿಸುವ ಖಾದರ್ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರುವಂತಾಗಲಿ ಎಂದು ಆಶಿಸಿದರು.

ಮಶ್ಹೂದ್ ತಂಙಳ್ ಮಾತನಾಡಿ, ಹಜ್ ನಿರ್ವಹಣೆ ಇಸ್ಲಾಮಿನ ಕಡ್ಡಾಯ ವಿಧಿಯಾಗಿದೆ. ನಿರ್ವಹಿಸಲು ದೇವನ ಅನುಗ್ರಹ ಇರಬೇಕು. 40 ದಿನಗಳವರೆಗೆ ಹಜ್‌ಗೆ ಹೋಗಿ ಬಂದವರ ಪ್ರಾರ್ಥನೆಗೆ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದರು.

ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ತಹಸೀಲ್ದಾರ್ ಪುಟ್ಟರಾಜು ಡಿ.ಎ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಮುಸ್ತಫಾ ಹರೇಕಳ, ಉಸ್ಮಾನ್ ಕಲ್ಲಾಪು, ಮುಸ್ತಫಾ ಅಬ್ದುಲ್ಲಾ, ಮನ್ಸೂರ್ ಮಂಚಿಲ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net