ಧರ್ಮಸ್ಥಳ ಸಂಘದ ಸದಸ್ಯರಿಂದ ತ್ಯಾಜ ವಿಲೇ

tyajya vilay
ತ್ಯಾಜ್ಯಕೊಂಪೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿರುವುದು
Published on

ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಗ್ರಾಪಂ ವ್ಯಾಪ್ತಿಯ ಶ್ರೀ ವಿನಾಯಕ ರೆಸಿಡೆನ್ಸ್ ಮುಂಭಾಗದಲ್ಲಿ ಕಿಡಿಗೇಡಿಗಳು ಕಸ ಎಸೆದು ತ್ಯಾಜ್ಯ ಕೊಂಪೆಯಾಗಿ ಮಾಡಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರು ಪರಿಸರ ಸ್ವಚ್ಛಗೊಳಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಸ್ವಚ್ಛಗೊಳಿಸಿದ್ದು, ಯಾರೋ ಒಬ್ಬ ಕಿಡಿಗೇಡಿ ಕಸ ಎಸೆದಿದ್ದ. ಕಸದಲ್ಲಿ ಸಿಕ್ಕಿದ ಬಿಲ್ಲಿನ ಆಧಾರದ ಮೇಲೆ ಆತನನ್ನು ಪತ್ತೆ ಹಚ್ಚಿ ಚಾರ ಗ್ರಾಪಂ ಅವರು ಕರೆಸಿ ವಾರ್ನಿಂಗ್ ನೀಡಿ ಕಳುಹಿಸಿದ್ದರು. ಇಲ್ಲಿರುವ ಕಸದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ತ್ಯಾಜ್ಯದ ಕೊಂಪೆ ತೆರವಿನಿಂದ ಸಾರ್ವಜನಿಕರು ನಿಟ್ಟಿಸಿರು ಬಿಟ್ಟು ತಿರುಗಾಡುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net