

ಕಾಸರಗೋಡು: ಮೊಗ್ರಾಲ್ ಪುತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ಕಾಮಗಾರಿ ಸಂದರ್ಭ ಹೆದ್ದಾರಿಯಲ್ಲಿ ಬೀದಿದೀಪ ಅಳವಡಿಕೆ ವೇಳೆ ಕ್ರೇನ್ ತುಂಡಾಗಿ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ವಡಗರ ನಿವಾಸಿಗಳಾದ ಅಕ್ಷಯ್(38) ಹಾಗೂ ಅಶ್ವಿನ್(26) ಮೃತಪಟ್ಟವರು. ಹೆದ್ದಾರಿಯಲ್ಲಿ ಅಳವಡಿಸಿರುವ ಬೃಹತ್ ವಿದ್ಯುತ್ ಕಂಬಕ್ಕೆ ದೀಪ ಅಳವಡಿಸಲು ಬಳಸಿದ್ದ ಬೃಹತ್ ಕ್ರೇನ್ನ ಬಕೆಟ್, ಯಂತ್ರದಿಂದ ಬೇರ್ಪಟ್ಟು ರಸ್ತೆಗೆ ಬಿದ್ದಿದೆ. ಗಂಭೀರ ಗಾಯಗೊಂಡ ಇಬ್ಬರನ್ನೂ ತಕ್ಷಣ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.