2 ಸುತ್ತಿನ ಪರೀಕ್ಷೆ ನಂತರ ಬಿಡುಗಡೆ ಮಾಡಿದರು, 3ನೇ ಸುತ್ತಿನ ಪರೀಕ್ಷೆಯ ಬಳಿಕ ಕರೊನಾ ಸೋಂಕು ದೃಢಪಟ್ಟಿತು

gims
Published on

ನೋಯ್ಡಾ: ದೆಹಲಿ ರಾಜ್ಯದಲ್ಲಿ ಕರೊನಾ ಪಿಡುಗು ಜೋರಾಗಿದೆ. ಈ ಭಾಗದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹೀಗಿರುವಾಗ ಎರಡು ಸುತ್ತಿನ ಪರೀಕ್ಷೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಬಿಡುಗಡೆ ಮಾಡಲಾಗಿದ್ದ ಇಬ್ಬರು ವ್ಯಕ್ತಿಗಳಲ್ಲಿ ಮೂರನೇ ಸುತ್ತಿನ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕು ಇಲ್ಲವೆಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದ ಅವರಿಬ್ಬರನ್ನೂ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಐಎಂಎಸ್​) ಇವರಿಬ್ಬರನ್ನೂ ಸೋಂಕು ತಗುಲಿರುವ ಶಂಕೆಯಲ್ಲಿ ದಾಖಲಿಸಲಾಗಿತ್ತು. 24 ಗಂಟೆ ಅವಧಿಯಲ್ಲಿ ಇವರಿಬ್ಬರಿಗೂ 2 ಸುತ್ತಿನ ಗಂಟ್ರಲ ದ್ರವ ಮತ್ತು ರಕ್ತ ಪರೀಕ್ಷೆ ಮಾಡಲಾಗಿತ್ತು. ಎರಡೂ ಸುತ್ತಿನಲ್ಲೂ ಸೋಂಕು ತಗುಲಿಲ್ಲ ಎಂಬ ವರದಿ ಬಂದಿತ್ತು. ಹಾಗಾಗಿ ಶುಕ್ರವಾರ ಇವರಿಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಆದರೆ ಇವರನ್ನು ಬಿಡುಗಡೆ ಮಾಡುವ ಮುನ್ನ ಸಂಗ್ರಹಿಸಲಾಗಿದ್ದ ಮೂರನೇ ಮಾದರಿಯನ್ನು ಪರೀಕ್ಷಿಸಿದಾಗ, ಇವರಲ್ಲಿ ಸೋಂಕು ಇರುವುದು ದೃಢಪಟ್ಟಿತು. ಹಾಗಾಗಿ ಇವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net