ಲಾಕ್​ಡೌನ್​ ತೆರವುಗೊಳಿಸುವ ಬಗ್ಗೆ ಸಿಎಂ ಸಮಾಲೋಚನೆ, ಖಾಸಗಿ ಸಂಸ್ಥೆಯಿಂದ ಸ್ಮಾರ್ಟ್​ ಲಾಕ್​ಡೌನ್​ ಕುರಿತು ಸಲಹೆ

smart lockdown
Published on

ಬೆಂಗಳೂರು: ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್​ನ ಮೊದಲ ಹಂತ ಮಂಗಳವಾರಕ್ಕೆ (ಏಪ್ರಿಲ್​ 14) ಅಂತ್ಯವಾಗಲಿದೆ. ಈಗಾಗಲೆ ಲಾಕ್​ಡೌನ್​ ಅನ್ನು ಏಪ್ರಿಲ್​ 30ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ಲಾಕ್​ಡೌನ್​ ಅನ್ನು ಅತ್ಯಂತ ಸ್ಮಾರ್ಟ್​ ಆಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್​. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ಈ ಸಮಾಲೋಚನೆಯ ವೇಳೆ ಸ್ಮಾರ್ಟ್​ ಲಾಕ್​ಡೌನ್​ ಬಗ್ಗೆ ಖಾಸಗಿ ಸಂಸ್ಥೆಯೊಂದು ಸಿಎಂ ಎದುರು ಪವರ್​ಪಾಯಿಂಟ್​ ಪರ್ಸೆಂಟೇಷನ್​ ನೀಡಿತು.

ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳಲ್ಲದೆ ಡಿಸಿಎಂ ಡಾ. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್​. ಅಶೋಕ್​ ಸೇರಿ ಹಲವು ಸಚಿವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ, ಸಣ್ಣ ಕೈಗಾರಿಕೆಗಳು, ತಯಾರಿಕಾ ಕ್ಷೇತ್ರಕ್ಕೆ ವಿನಾಯಿತಿ, ಐಟಿ-ಬಿಟಿ ಕಂಪನಿಗಳಿಗೆ ಶೇ.50 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕೊಡುವ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸಲಹೆಗಳನ್ನು ಆಧರಿಸಿ ಸಭೆಯಲ್ಲಿ ಚಿಂತನಮಂಥನ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net