

ನವದೆಹಲಿ: ಭಾರತದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಭಾರತದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳಿಗೆ ಇನ್ನು 24 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.
ರಾಯಭಾರ ಕಚೇರಿಯ ಅಧಿಕಾರಿಗಳಾಗಿದ್ದುಕೊಂಡು ನಿರ್ವಹಿಸಬೇಕಾಗಿದ್ದ ಕೆಲಸವನ್ನು ಬಿಟ್ಟು ಬೇಹುಗಾರಿಕೆಯಂಥ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ದೇಶದಿಂದ ಹೊರಹಾಕಲು ಸರ್ಕಾರ ನಿರ್ಧರಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೇಹುಗಾರಿಕೆ ನಡೆಸುತ್ತಿರುವಾಗಲೇ ಈ ಇಬ್ಬರು ಅಧಿಕಾರಿಗಳನ್ನು ಭದ್ರತಾಪಡೆ ಸಿಬ್ಬಂದಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು ಎನ್ನಲಾಗಿದೆ.