

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣಾ ಅವಧಿಯಲ್ಲಿ ಮತದಾರರಿಗೆ ನೀಡಿರುವ ಗ್ಯಾರಂಟಿ ಭರವಸೆಯಲ್ಲಿ , ಶಕ್ತಿ ಯೋಜನೆ ಕೂಡಾ ಒಂದಾಗಿದೆ. ಈ ಉಚಿತ ಬಸ್ ವ್ಯವಸ್ಥೆಯು ಹೆಣ್ಮಕ್ಕಳ ಪೋಷಕರಲ್ಲಿ ಕೊಂಚ ತಲೆನೋವು ತಂದಿದೆ.
ಬಸ್ಸಿನಲ್ಲಿ ಸೀಟಿಗಾಗಿ ನಾರಿಯರ ಗಲಾಟೆ ಒಂದೆಡೆಯಾದರೆ ಇನ್ನೊಂದೆಡೆ ಚಿಕ್ಕಪುಟ್ಟ ವಿಷಯಕ್ಕೆಲ್ಲ ಬೇಜಾರ್ ಮಾಡಿಕೊಂಡು ಮಕ್ಕಳು ಬಸ್ ಏರುತ್ತಿದ್ದಾರೆ. ಇಂತಹದ್ದೆ ಒಂದು ಪ್ರಕರಣ ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಸಹೋದರಿಯರಿಬ್ಬರು ಅಪ್ಪ ಚಾಕಲೇಟ್ಗೆ ದುಡ್ಡು ಕೊಡುತ್ತಿಲ್ಲವೆಂದು ಉಚಿತ ಬಸ್ ಹತ್ತಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಇತ್ತ ಪೋಷಕರು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂದು ಕೋಣನಕುಂಟೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಎರಡು ದಿನದ ಬಳಿಕ ಮಕ್ಕಳು ಧರ್ಮಸ್ಥಳದಲ್ಲಿ ಸಿಕ್ಕಿದ್ದಾರೆ.
ಅಪ್ಪನಿಗೆ ಚಾಕ್ಲಟ್ ಕೂಡಿಸೋಕೆ ಹೇಳಿದ್ವಿ. ಅವರು ಕೊಡಿಸಲಿಲ್ಲ, ಜೊತೆಗೆ ನಮ್ಮ ಮೇಲೆ ಕೂಗಾಡಿದ್ರು. ಉಚಿತ ಬಸ್ ಹತ್ತಿದೇವು, ಹೇಗೂ ಟಿಕೆಟ್ಗೆ ಹಣ ಕೊಡಬೇಕಿಲ್ಲ ಅಲ್ವಾ ಧರ್ಮಸ್ಥಳಕ್ಕೆ ಬಂದು ಇಳಿದಿದ್ದೇವೆ ಎಂದು ಮಕ್ಕಳು ಹೇಳಿದ್ದಾರೆ.
ಒಬ್ಬಳು 10ನೇ ತರಗತಿ ಇನ್ನೊಬ್ಬಳು 9 ನೇ ತರಗತಿ ಓದುತ್ತಿದ್ದು, ಇಬ್ಬರು ಸಹೋದರಿಯರಾಗಿದ್ದಾರೆ. ಶಕ್ತಿ ಯೋಜನೆಯಿಂದ ಮಕ್ಕಳು ಈ ರೀತಿ ಮಾಡಿದ್ದು ಪೋಷಕರಿಗೆ ಬೇಸರ ತಂದಿದೆ.