More

    ಆರ್​ಆರ್​ಆರ್: ಸಿನಿಮಾ ಬಿಡುಗಡೆಗೆ ಎರಡು ಡೇಟ್ ಫಿಕ್ಸ್​!; ಯಾವಾಗ, ಯಾಕೆ? ಇಲ್ಲಿದೆ ಮಾಹಿತಿ

    ಬೆಂಗಳೂರು: ಕರೊನಾ ಮೂರನೇ ಅಲೆ ತೀವ್ರಗತಿಯಲ್ಲಿ ದೇಶಾದ್ಯಂತ ವ್ಯಾಪಿಸಿದ್ದು, ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಪರಿಣಾಮವಾಗಿ, ಮುಂದೇನು ಹೇಗೆ ಎಂದು ನಿರ್ಧರಿಸಲಾಗದ ವಾತಾವರಣ ನಿರ್ಮಾಣವಾಗಿದೆ. ಮಾತ್ರವಲ್ಲ, ಕೈಗಾರಿಕೆ, ಉದ್ಯಮ ಸೇರಿ ಹಲವಾರು ಕ್ಷೇತ್ರಗಳಲ್ಲಿ ಒಂಥರಾ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ.

    ಈಗಾಗಲೇ ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ನಿಗದಿಯಾಗಿದ್ದರೂ, ಮೂರನೇ ಅಲೆಯಲ್ಲಿ ಏಕಾಏಕಿ ಹೆಚ್ಚಾದ ಕರೊನಾ ಪ್ರಕರಣ ಮತ್ತೆ ಅವುಗಳಿಗೆ ಹಿನ್ನಡೆ ಉಂಟುಮಾಡಿದೆ. ತತ್ಪರಿಣಾಮ, ಬಹಳಷ್ಟು ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿವೆ.

    ಆರ್​​ಆರ್​ಆರ್​ ಸಿನಿಮಾ ಈ ಹಿಂದೆ ಜ. 7ರಂದು ಬಿಡುಗಡೆ ಮಾಡಬೇಕೆಂದು ನಿಗದಿಯಾಗಿತ್ತು. ಆ ಕುರಿತು ಭರ್ಜರಿ ಪ್ರಚಾರವನ್ನೂ ಕೈಗೊಳ್ಳಲಾಗಿತ್ತು. ಆದರೆ ಒಮಿಕ್ರಾನ್ ವ್ಯಾಪಿಸಿದ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗಿತ್ತು.

    ಇದನ್ನೂ ಓದಿ: #MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

    ಇದೀಗ ಮತ್ತೆ ಬಿಡುಗಡೆಗೆ ಆರ್​ಆರ್​ಆರ್ ಚಿತ್ರತಂಡ ಸಜ್ಜಾಗಿದೆ. ಅಂದರೆ ಈ ಸಾಂಕ್ರಾಮಿಕ ಪಿಡುಗು ನಿವಾರಣೆಯಾಗಿ ಪರಿಸ್ಥಿತಿ ಸುಧಾರಣೆ ಕಂಡರೆ ಇಂಥ ದಿನ ಚಿತ್ರ ಬಿಡುಗಡೆ ಮಾಡುವುದಾಗಿ ತಂಡ ಹೇಳಿಕೊಂಡಿದೆ. ಒಂದುವೇಳೆ, ಪರಿಸ್ಥಿತಿ ಹೀಗೇ ಮುಂದುವರಿದರೂ ಸಿನಿಮಾ ಬಿಡುಗಡೆ ಖಚಿತ ಎಂದು ಚಿತ್ರತಂಡ ಹೇಳಿದೆ.

    ಇದನ್ನೂ ಓದಿ: ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

    ಎಲ್ಲ ಸರಿಹೋಗಿ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ಅಂದರೆ ಶೇ.100 ಆಸನ ಭರ್ತಿಯೊಂದಿಗೆ ಪ್ರದರ್ಶನಕ್ಕೆ ಸಜ್ಜಾದರೆ ಆರ್​ಆರ್​ಆರ್​ ಸಿನಿಮಾ ಇದೇ ಮಾರ್ಚ್ 18ರಂದು ಬಿಡುಗಡೆ ಆಗಲಿದೆ. ಇಲ್ಲದಿದ್ದರೆ ಏಪ್ರಿಲ್ 28ಕ್ಕೆ ಆರ್​ಆರ್​ಆರ್​ ಚಿತ್ರ ಬಿಡುಗಡೆ ಖಚಿತ ಎಂದು ಸಿನಿತಂಡ ಹೇಳಿಕೊಂಡಿದೆ.

    ಆರ್​ಆರ್​ಆರ್: ಸಿನಿಮಾ ಬಿಡುಗಡೆಗೆ ಎರಡು ಡೇಟ್ ಫಿಕ್ಸ್​!; ಯಾವಾಗ, ಯಾಕೆ? ಇಲ್ಲಿದೆ ಮಾಹಿತಿ

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ತಾಯಿ, ಅಕ್ಕ, ಸೋದರಳಿಯ ಒಗ್ಗೂಡಿ ಬರ್ಬರವಾಗಿ ಕೊಂದರು; ಹಾಗಾದರೆ ಆತ ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts