ಹಸುವಿನ ಮೈ ತೊಳೆಸಲು ಕೆರೆಗೆ ಇಳಿದ ಬಾಲಕರು ನೀರುಪಾಲು..

29 may 20
Published on

ದಾವಣಗೆರೆ: ಹಸುವಿನ ಮೈ ತೊಳೆಸಲು ಕೆರೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ದುರ್ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್​.ಗೋಪಗೊಂಡನಹಳ್ಳಿಯಲ್ಲಿ ನಡೆದಿದೆ.

ಮಹೇಶ್​ ಮತ್ತು ಮನು ಮೃತರು. ಇಬ್ಬರೂ 14 ವರ್ಷದ ಬಾಲಕರಾಗಿದ್ದು, ಆಕಳನ್ನು ಕರೆದುಕೊಂಡು ಕೆರೆ ಬಳಿ ಹೋಗಿದ್ದರು. ಇದೀಗ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್​ ತುಷಾರ್​ ಬಿ.ಹೊಸೂರ, ಸಿಪಿಐ ಟಿ.ವಿ.ದೇವರಾಜ್​, ಪಿಎಸ್​ಐ ತಿಪ್ಪೇಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net