

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇದೇ ಸೆಪ್ಟೆಂಬರ್ 2 ರಂದು ತಮ್ಮ ನೆಚ್ಚಿನ ಸ್ಟಾರ್ ನಟನ ಜನ್ಮದಿನವನ್ನು ವಿಜೃಂಭಣೆಯಾಗಿ ಆಚರಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಮಧ್ಯೆ ಫ್ಯಾನ್ಸ್ಗೆ ಇದೀಗ ಡಬಲ್ ಧಮಾಕವೊಂದು ದೊರತಿದೆ.
ಪವನ್ ಕಲ್ಯಾಣ್ ನಟನೆಯ ಎರಡು ಟಾಪ್ ಸಿನಿಮಾಗಳು ಇದೀಗ ಅಭಿಮಾನಿಗಳಿಗೋಸ್ಕರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗಲಿವೆ. 2004 ರಲ್ಲಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಹಿಟ್ ಆಗಿದ್ದ 'ಗುಡುಂಬಾ ಶಂಕರ್' ಮತ್ತು 2012 ರಲ್ಲಿ ಪ್ರೇಕ್ಷಕರ ಮನಗೆದ್ದ 'ಗಬ್ಬರ್ ಸಿಂಗ್' ಚಿತ್ರಗಳು ತೆರೆ ಮೇಲೆ ಮತ್ತೊಮ್ಮೆ ರಾರಾಜಿಸಲಿದೆ. ಈ ಬಗ್ಗೆ ನಾಗಬಾಬು ಅವರು ಮಾಹಿತಿ ನೀಡಿದ್ದು, ಸಿನಿಮಾಗಳನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮರು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದ್ದಾರೆ.
ಗುಡುಂಬಾ ಶಂಕರ್ ಚಿತ್ರ ಮರು ಬಿಡುಗಡೆಯಲ್ಲಿ ಗಳಿಸುವ ಆದಾಯವನ್ನು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ನೀಡಲಾಗುವುದು ಎಂದು ಸಿನಿ ವರದಿ ಮಾಹಿತಿ ನೀಡಿದೆ,(ಏಜೆನ್ಸೀಸ್).