

ನವದೆಹಲಿ: ಇಂದು ದೆಹಲಿಯಲ್ಲಿ ನಡೆದ ಲೋಕಸಭೆಯಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸದನದಿಂದ ಹೊರ ಹೋಗುವ ವೇಳೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಇದನ್ನು ಪ್ರತ್ಯೇಕವಾಗಿ ಸದನದಲ್ಲಿದ್ದ ಬಿಜೆಪಿ ಮಹಿಳಾ ಸಂಸದರು ಆರೋಪಿಸಿದ್ದು, ಈ ಬಗ್ಗೆ ನಟಿ, ರಾಜಕಾರಿಣಿ ಹೇಮಾ ಮಾಲಿನಿ, ನಾನು ರಾಹುಲ್ ಗಾಂಧಿ ಮುತ್ತು ಕೊಟ್ಟಿದ್ದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಇತರ ಪಕ್ಷದ ಮಹಿಳಾ ಸದಸ್ಯರು, ರಾಹುಲ್ ಗಾಂಧಿ ಸೃತಿ ಇರಾನಿ ಮತ್ತು ಹಲವು ಮಹಿಳಾ ಸಂಸದರೊಂದಿಗೆ ನಡೆದುಕೊಂಡ ರೀತಿ ಅಕ್ಷಮ್ಯ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದರು.
ಸದನದಲ್ಲಿ ಘನತೆವೆತ್ತ ಮಹಿಳಾ ಸದಸ್ಯರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಲ್ಲದೆ, ಈ ಮಹಾ ಸದನದ ಘನತೆಗೆ ಕುಂದು ತಂದಿರುವ ಇಂತಹ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರನ್ನು ಪ್ರಶ್ನಿಸಿದಾಗ, ರಾಹುಲ್ ಗಾಂಧಿಯವರು ಫ್ಲೈಯಿಂಗ್ ಕಿಸ್ ಕೊಟ್ಟಿದ್ದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).